ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧವಲ್ಲ, ಅಧಿಕಾರ ದಾಹದಿಂದ ಹೊರಟಿರೋ ಅಪ್ಪ – ಮಕ್ಕಳ ವಿರುದ್ಧ ► ಸದನದಲ್ಲಿ ಗುಡುಗಿದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.25. ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧವಲ್ಲ, ಹೋರಾಟ ಏನಿದ್ದರೂ ಅಧಿಕಾರ ದಾಹದಿಂದ ಹೊರಟಿರೋ ಅಪ್ಪ – ಮಕ್ಕಳ ವಿರುದ್ಧ ಎಂದು ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಒಂದೇ ಒಂದು ಕಾರಣಕ್ಕಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಮುಳುಗುವ ದೋಣಿಯಲ್ಲಿ ಕಾಲಿಟ್ಟರಲ್ಲಾ ಎಂದು ಒಂದು ಕ್ಷಣ ಭಾವುಕರಾದ ಬಿಎಸ್ವೈ, ಕೆಲವೇ ದಿನಗಳಲ್ಲಿ ಅಪ್ಪ – ಮಕ್ಕಳಿಂದ ಕಾಂಗ್ರೆಸ್ ಪಕ್ಷ ನಾಶವಾಗಲಿದೆ ಎಂದರು. ಈ ಹಿಂದೆ ಬಿಜೆಪಿ ಜೊತೆ ಮೈತ್ರಿ ಮಾಡಿದ್ದರ ಬಗ್ಗೆ ಪಶ್ಚಾತ್ತಾಪವಾಗುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ನಾವೇನು ಜೆಡಿಎಸ್ ನ್ನು ಬಾಚಿ ಅಪ್ಪಿಕೊಳ್ಳಲು ಹೋಗಿದ್ವಾ..? ಅವರೇ ಬಂದ ಕಾರಣ ನಾವು ಹೊಂದಾಣಿಕೆ ಮಾಡಿಕೊಂಡಿದ್ದೆವು ಎಂದು ತಿರುಗೇಟು‌ ನೀಡಿದರು.

Also Read  ಸೆ.17 ರವರೆಗೆ ದರ್ಶನ್‌ ಮತ್ತು ಗ್ಯಾಂಗ್‌ ಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

error: Content is protected !!
Scroll to Top