(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.24. ಯೆಮನ್ ನ ಏಡೆನ್ ನಗರದ ಈಶಾನ್ಯ ಮತ್ತು 560 ಕಿಮೀ ಸೊಕೊಟ್ರಾ ದ್ವೀಪಗಳ ಗಡಿ ಭಾಗದಲ್ಲಿ ನೆಲೆಯಾಗಿರುವ ಚಂಡಮಾರುತವು ಭಾರತದ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಡೆನ್ ಕೊಲ್ಲಿಯಲ್ಲಿ ಕೇಂದ್ರಿಕೃತವಾಗಿರುವ ಸಾಗರ್ ಚಂಡಮಾರುತವು ತಮಿಳುನಾಡು, ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ದ್ವೀಪ ಸಮೂಹಗಳಿಗೆ ಹಾಗೂ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸುವ ಸಾಧ್ಯತೆ ಇದ್ದು, ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ. ಮುಂದಿನ 24 ಗಂಟೆಯಿಂದ 48 ಗಂಟೆಗಳ ಒಳಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದ್ದು, ಭಾರೀ ಅಲೆಗಳು ಏಲುವುದರಿಂದಾಗಿ ಮೀನುಗಾರರು ಎಚ್ಚರವಹಿಸುವಂತೆ ತಿಳಿಸಿದೆ.