ಇಂದು ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ, ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣ ವಚನ ► ಉತ್ತರದಿಂದ ದಕ್ಷಿಣದವರೆಗಿನ ಗಣ್ಯಾತಿಗಣ್ಯರು ಭಾಗಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.23. ರಾಜ್ಯದ 24 ನೆಯ ಮುಖ್ಯಮಂತ್ರಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಮುಖಂಡ ಡಾ.ಜಿ. ಪರಮೇಶ್ವರ್ ಇಂದು ಸಂಜೆ 4.30 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಪದಗ್ರಹಣ ಸಮಾರಂಭಕ್ಕೆ ವಿಧಾನ ಸೌಧದ ಮುಂಭಾಗದಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದ್ದು, ಬಿಜೆಪಿ ವಿರೋಧಿ ಬಣ ಹಾಗೂ ತೃತೀಯ ರಂಗದ ನಾಯಕರು ಸೇರಿದಂತೆ ಉತ್ತರದಿಂದ ದಕ್ಷಿಣದವರೆಗಿನ ಗಣ್ಯಾತಿಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಸ್ಪೀಕರ್ ಆಗಿ ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಹಾಗೂ ಡೆಪ್ಯೂಟಿ ಸ್ಪೀಕರ್ ಆಗಿ ಜೆಡಿಎಸ್​ನ ಕುಮಾರ್​ ಆಯ್ಕೆಯಾಗಿದ್ದಾರೆ.

Also Read  ಬಜ್ಪೆ: ಅಪ್ರಾಪ್ತೆಗೆ ಥಳಿಸಿದ ಮಹಿಳಾ ಪೇದೆ ವಿರುದ್ದ ದೂರು

error: Content is protected !!
Scroll to Top