(ನ್ಯೂಸ್ ಕಡಬ) newskadaba.com ಜೂ. 10. 2026-27ನೇ ಸಾಲಿಗೆ ಸಮನ್ವಯ ಶಿಕ್ಷಣ ಕಾರ್ಯತಂತ್ರದಡಿಯಲ್ಲಿ ಜಿಲ್ಲೆಯಲ್ಲಿ ಖಾಲಿ ಇರುವ ಬಿ.ಐ.ಇ.ಆರ್.ಟಿ. ಹುದ್ದೆಗಳಿಗೆ (ವಿಕಲಚೇತನ ಮಕ್ಕಳಿಗೆ ಬೋಧಿಸುವ [Special D.Ed(Primary) & Special B.Ed (Secondary)] ವಿದ್ಯಾರ್ಹತೆಯುಳ್ಳ ವಿಶೇಷ ಶಿಕ್ಷಕರನ್ನು ನೇರ ಗುತ್ತಿಗೆ ಮೂಲಕ ತಾತ್ಕಾಲಿಕವಾಗಿ 2027 ರ ಮೇ 31 ರವರೆಗೆ ಸೇವೆ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲೆಯೊಂದಿಗೆ ನಗರದ ಕೊಟ್ಟಾರದಲ್ಲಿರುವ ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಕಛೇರಿಗೆ ಜೂನ್ 16 ರೊಳಗೆ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ: ಬಂಟ್ವಾಳ- 2(ಪ್ರೌಢ), ಬೆಳ್ತಂಗಡಿ-2(ಪ್ರೌಢ), ಮಂಗಳೂರು ಉತ್ತರ-2(ಪ್ರೌಢ), ಮಂಗಳೂರು ದಕ್ಷಿಣ-2(ಪ್ರೌಢ), ಮೂಡಬಿದ್ರೆ-3 (1-ಪ್ರಾಥಮಿಕ, 2-ಪ್ರೌಢ), ಪುತ್ತೂರು-4 (ಪ್ರಾಥಮಿಕ-2, ಪ್ರೌಢ-2), ಸುಳ್ಯ-4 (ಪ್ರಾಥಮಿಕ-2, ಪ್ರೌಢ-2).
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ. 9480695431 ಸಂಪರ್ಕಿಸಬಹುದು ಎಂದು ಸಮಗ್ರ ಶಿಕ್ಷಣ ಕರ್ನಾಟಕ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









