ನಾಳೆ ಕನಾ೯ಟಕ ರಾಜ್ಯ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿರುವ ಎಚ್ ಡಿ ಕೆ ಅವರು ತಾವು ಕೊಟ್ಟ ಆಶ್ವಾಸನೆ ಅಂತೆ ಸಾಲ ಮನ್ನಾ ಮಾಡುತ್ತಾರೊ ಇಲ್ಲವೊ ಎಂದು ಕಾದು ನೊಡಬೇಕಾಗಿದೆ.
ಮತಯಾಚನೆ ವೇಳೆಯಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದ ಎಚ್ ಡಿ ಕೆ ಅವರು ಯಾವ ನಿಧಾ೯ರ ತೆಗೆದುಕೊಳ್ಳುತ್ತಾರೆ ಎಂದು ಜನರು ಆತುರದಿಂದ ಕಾಯುತ್ತಿದ್ದಾರೆ.
ಇದೀಗ ಸಕಾ೯ರವು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ 42 ಸಾವಿರ ಕೋಟಿ, ಗ್ರಾಮೀಣ ಬ್ಯಾಂಕ್ ನಲ್ಲಿ 8ಸಾವಿರ ಕೋಟಿ, ಸಹಕಾರ ಬ್ಯಾಂಕ್ ನಲ್ಲಿ 3ಸಾವಿರ ಕೋಟಿ ಸೇರಿದಂತೆ ಒಟ್ಟು 53ಸಾವಿರ ಕೋಟಿ ಸಾಲ ಹೊಂದಿದೆ. ಇದರ ನಡುವೆಯೂ ಎಚ್ ಡಿ ಕೆ ಅವರು ರೈತರ ಸಾಲ ಮನ್ನಾ ಮಾಡುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕಾಗಿದೆ.