ಅಪರಿಚಿತ ವೈರಸ್ ಸೋಂಕಿಗೆ ಮೂರು ಬಲಿ, ಹಲವರು ಗಂಭೀರಾವಸ್ಥೆಯಲ್ಲಿ ► ಬೆಚ್ಚಿಬಿದ್ದ ಕೇರಳ ವೈದ್ಯಕೀಯ ಲೋಕ

(ನ್ಯೂಸ್ ಕಡಬ) newskadaba.com ಕೇರಳ, ಮೇ.21. ವೈರಸ್ ಸೋಂಕಿಗೆ ತುತ್ತಾದ ಒಂದೇ ಕುಟುಂಬದ ಮೂವರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕೇರಳದ ಕಲ್ಲಿಕೋಟೆಯ ಪೆರಂಬಾರ ಎಂಬಲ್ಲಿ ನಡೆದಿದೆ.

ಮೃತರ ದುರ್ದೈವಿಗಳನ್ನು ಪೆರಂಬಾರ ನಿವಾಸಿಗಳಾದ ಮುಹಮ್ಮದ್ ಸಾದಿಕ್, ಅವರ ಸಹೋದರ ಮುಹಮ್ಮದ್ ಸಾಲಿಹ್ ಹಾಗೂ ಮರಿಯಮ್ಮ ಎಂಮದು ಗುರುತಿಸಲಾಗಿದೆ. ಜ್ವರ ಉಲ್ಬಣಗೊಂಡು ಮೃತಪಟ್ಟಿದ್ದು, ಯಾವ ಕಾರಣದಿಂದಾಗಿ ಮೃತಪಟ್ಟರೆನ್ನುವುದು ಮಾತ್ರ ಇನ್ನೂ ದೃಢಪಟ್ಟಿಲ್ಲದ ಕಾರಣ ಕೇರಳದ ವೈದ್ಯ ಲೋಕವೇ ಬೆಚ್ಚಿಬಿದ್ದಿದೆ. ಅಲ್ಲದೆ ವೈದ್ಯಕೀಯ ತಜ್ಞರನ್ನು ಶೀಘ್ರದಲ್ಲೇ ರಾಜ್ಯಕ್ಕೆ ಕಳುಹಿಸಬೇಕು ಎಂದು ಕೇರಳ ಸರಕಾರವು ಕೇಂದ್ರಕ್ಕೆ ಪತ್ರ ಬರೆದಿದೆ.

Also Read  2019-20ನೇ ಸಾಲಿಗೆ ಎಸ್ಸಿಪಿ ಮತ್ತು ಟಿಎಸ್ಪಿ ಅನುದಾನದಡಿ ಕೌಶಲ್ಯ ಅಭಿವೃದ್ಧಿ ತರಬೇತಿ ಮೇಳ

ಈಗಾಗಲೇ ಅಪರಿಚಿತ ಸೋಂಕಿಗೆ ಹಲವರು ತುತ್ತಾಗಿದ್ದು, ಮೃತ ಕುಟುಂಬದ ಕೆಲವರು, ಚಿಕಿತ್ಸೆ ನೀಡಿದ್ದ ನರ್ಸ್ ಸೇರಿದಂತೆ ಇಪ್ಪತ್ತೈದಕ್ಕೂ ಹೆಚ್ಚು ಜನ ಈ ಸೋಂಕಿನಿಂದ ಬಳಲುತ್ತಿದ್ದು, ಆರು ಮಂದಿಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಯಾವ ವೈರಸ್ ಸೋಂಕು ಎಂದು ವೈದ್ಯರಿಗೆ ಇನ್ನೂ ಸ್ಪಷ್ಟವಾಗಿಲ್ಲದ ಕಾರಣ ಕೇರಳ ವೈದ್ಯಕೀಯ ಲೋಕವೇ ಕಂಗಾಲಾಗಿದೆ.

error: Content is protected !!
Scroll to Top