ವಾಟ್ಸ್ಅಪ್ ನಲ್ಲಿ ಸುಳ್ಳು ಸುದ್ದಿ ಹರಡಿ ಮತೀಯ ಗಲಭೆಗೆ ಪ್ರಚೋದನೆ ► ಪಂಜದ ಯುವಕ ಸೇರಿದಂತೆ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.21. ವಾಟ್ಸ್ಅಪ್ ನಲ್ಲಿ ಸುಳ್ಳು ಸುದ್ದಿ ಹರಡಿ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಉಂಟಾದ ಮತೀಯ ಗಲಭೆಗೆ ಕಾರಣವಾದ ಇಬ್ಬರನ್ನು ಡಿಸಿಐಬಿ ಇನ್ಸ್‌ಪೆಕ್ಟರ್ ಸುನಿಲ್ ವೈ ನಾಯಕ್‌ ನೇತೃತ್ವದ ಪೊಲೀಸರು ಭಾನುವಾರದಂದು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸುಳ್ಯ ತಾಲೂಕಿನ ಪಂಜ ಸಮೀಪದ ಪಂಬೆತ್ತಾಡಿ ನಿವಾಸಿ ಸದಾಶಿವ ಗೌಡ ಎಂಬವರ ಪುತ್ರ ದಿನೇಶ ಯಾನೆ ದಯಾನಂದ(31) ಹಾಗೂ ಬಂಟ್ವಾಳ ತಾಲೂಕಿನ ಕೆರಲೆ ನಿವಾಸಿ ಲೋಕೇಶ್ ಎಂಬವರ ಪುತ್ರ ನಿತಿನ್ ಎಂದು ಗುರುತಿಸಲಾಗಿದೆ. ಆರೋಪಿಗಳು ವಿಟ್ಲದಲ್ಲಿ ಎರಡು ಕೋಮಿನ ನಡುವೆ ನಡೆದ ಸಂಘರ್ಷಕ್ಕೆ ಸಂಬಂಧಿಸಿ ಕೋಮು ಭಾವನೆ ಕೆರಳಿಸುವ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಫಾರ್ವರ್ಡ್‌ ಮಾಡಿದ್ದಾರೆ ಎಂಬ ಅಪಾದನೆ ಮೇರೆಗೆ ಮಂಗಳೂರು ಸಿ‌ಸಿಬಿ ಪೊಲೀಸರು ಭಾನುವಾರದಂದು ಬಂಧಿಸಿದ್ದಾರೆ.

Also Read  BEARING NEWS ಮಾ.21ರಿಂದ ಕೇರಳಕ್ಕೆ ವಾಹನ ಸಂಚಾರ ನಿಷೇಧ: ದ.ಕ ಡಿಸಿ ಆದೇಶ

error: Content is protected !!
Scroll to Top