ಕಡಬ: ರಬ್ಬರ್ ನಿಗಮದ ಜಮೀನು ಒತ್ತುವರಿ ► ತಡೆಯಲು ಹೋದ ಸಿಬ್ಬಂದಿಗಳಿಗೆ ಜೀವ ಬೆದರಿಕೆ

(ನ್ಯೂಸ್ ಕಡಬ) newskadaba.com ಕಡಬ, ಮೇ.20. ರಾಜ್ಯ ರಬ್ಬರ್ ಅಭಿವೃದ್ಧಿ ನಿಗಮಕ್ಕೆ ಸೇರಿದ ಜಮೀನನ್ನು ಒತ್ತುವರಿ ಮಾಡಿದ್ದನ್ನು ತಡೆಯಲು ಹೋದ ನಿಗಮದ ಸಿಬ್ಬಂದಿಗಳಿಗೆ ಕುಟುಂಬವೊಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಬ್ರಹ್ಮಣ್ಯ ರಬ್ಬರ್ ವಿಭಾಗದ ಮೂಜೂರು ಘಟಕದ ಮಂಡೆಕರ ಎಂಬಲ್ಲಿ ಮೀಸಲು ಅರಣ್ಯ ಪ್ರದೇಶದ 28.10 ಹೆಕ್ಟೇರ್ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ರಬ್ಬರ್ ಅಭಿವೃದ್ಧಿ ನಿಗಮದ ವತಿಯಿಂದ ರಬ್ಬರ್ ಗಿಡಗಳನ್ನು ಮರು ನಾಟಿ ಮಾಡಲು ಹಿಟಾಚಿ ಯಂತ್ರದಲ್ಲಿ ಗುಂಡಿ ತೋಡುತ್ತಿದ್ದಾಗ ಮೀಸಲು ಅರಣ್ಯ ಪ್ರದೇಶದ ಪಕ್ಕದಲ್ಲಿ ವಾಸಿಸುತ್ತಿದ್ದ ನಾಗಪ್ಪ ಎಂಬವರು ಜಾಗವನ್ನು ಒತ್ತುವರಿ ಮಾಡುತ್ತಿದ್ದು ಕಂಡುಬಂದಿದ್ದು, ಈ ಬಗ್ಗೆ ತಡೆಯಲು ಹೋದ ನಿಗಮದ ಸಿಬ್ಬಂದಿಗಳಿಗೆ ನಾಗಪ್ಪ ಹಾಗೂ ಅವರ ಪತ್ನಿ ರತಿ ಇತರ ನಾಲ್ವರೊಂದಿಗೆ ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ತೋಟಗಾರಿಕಾ ಅಧೀಕ್ಷಕ ಮಣಿ ನೀಡಿರುವ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಹಳೆಯ ಮೋಟರ್ ಸೈಕಲ್, ಹಳೆಯ ಓಮ್ನಿ ಹರಾಜು- ಪ್ರಕಟಣೆ

error: Content is protected !!
Scroll to Top