ಕುಂತೂರು: ವಾಟ್ಸ್ಅಪ್ ನಲ್ಲಿ ಫೋಟೊ ಹಾಕಿ ಪ್ರಚೋದನಕಾರಿ ಸಂದೇಶ ರವಾನೆ ► ಯುವಕನಿಂದ‌ ಕಡಬ ಠಾಣೆಗೆ ದೂರು

(ನ್ಯೂಸ್ ಕಡಬ) newskadaba.com ಕಡಬ, ಮೇ.20. ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ‌ ಎಂದು ಆರೋಪಿಸಿ ಯುವಕನೋರ್ವ ಕಡಬ ಠಾಣೆಗೆ ದೂರು ನೀಡಿದ್ದಾನೆ.

ಪುತ್ತೂರಿನ ಖಾಸಗಿ ಕಾಲೇಜು ವಿದ್ಯಾರ್ಥಿ, ಕುಂತೂರು ಗ್ರಾಮದ ಮುಡಿಪಿನಡ್ಕ ನಿವಾಸಿ ಅಬ್ದುಲ್‌ ಕುಂಞಿ‌ ಎಂಬವರ ಪುತ್ರ ಮಹಮ್ಮದ್ ನಿಝಾರ್ ಎಂಬಾತನ ಫೋಟೊದೊಂದಿಗೆ ಪ್ರಚೋದನಕಾರಿ ಆಡಿಯೋ ಸಂದೇಶವೊಂದು ವಾಟ್ಸ್ಅಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿರುವುದನ್ನು ಕಂಡು ಆತಂಕಗೊಂಡು ಕಡಬ ಪೊಲೀಸರಿಗೆ ದೂರು ನೀಡಿದ್ದಾನೆ. ತಾನು ನಿರಪರಾಧಿಯಾಗಿದ್ದು, ಈ ಪ್ರಚೋದನಕಾರಿ ಸಂದೇಶಕ್ಕೂ ತನಗೂ ಯಾವುದೇ ಸಂಬಂಧವಿರುವುದಿಲ್ಲವಾದುದರಿಂದ ಈ ಪ್ರಕರಣವನ್ನು ಬೆಳಕಿಗೆ ತಂದು ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.

Also Read  ಕುಂದಾಪುರ: ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿನೋದ್ ಕ್ರಾಸ್ಟೋ ನೇಮಕ

error: Content is protected !!
Scroll to Top