ಆಪರೇಷನ್ ಕಮಲ ವಿಫಲಗೊಂಡ ಹಿನ್ನೆಲೆ ► ಕೇವಲ 55 ಗಂಟೆಗಳಲ್ಲೇ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಟ್ಟ ಬಿಎಸ್ವೈ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.19. ರಾಜ್ಯದ 23 ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿ.ಎಸ್.ಯಡಿಯೂರಪ್ಪ ಕೊನೆಗೂ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಕೇವಲ 55 ಗಂಟೆಗಳಲ್ಲೇ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಡಿಯೂರಪ್ಪ ಸರಕಾರವು ವಿಫಲವಾಗಿದ್ದು, ಬಿಎಸ್ವೈ ಭಾವಪೂರ್ಣ ಭಾಷಣದಲ್ಲಿ ರಾಜೀನಾಮೆಯ ಸುಳಿವು ನೀಡಿದ್ದರು. ವಿಶ್ವಾಸಮತ ಪ್ರಸ್ತಾವನೆ ಮಂಡಿಸಿದ ಬಿಎಸ್ವೈ ಆಪರೇಷನ್ ಕಮಲ ವಿಫಲಗೊಂಡ ಹಿನ್ನೆಲೆಯಲ್ಲಿ ತಾನು ನಡೆದು ಬಂದ ಕಲ್ಲು ಮುಳ್ಳಿನ ಹಾದಿಯನ್ನು ವಿವರಿಸುತ್ತಾ ಕೊನೆಗೂ ರಾಜೀನಾಮೆಯ ವಿಚಾರವನ್ನು ಪ್ರಸ್ತಾಪಿಸಿದರು.

Also Read  ಗೃಹಲಕ್ಷ್ಮೀ, ಗೃಹಜ್ಯೋತಿ ಹೆಸರಿನಲ್ಲಿ ನಕಲಿ ಆಯಪ್ ಕಾರ್ಯಾಚರಣೆ- ಎಚ್ಚರವಹಿಸುವಂತೆ ಎಸ್.ಪಿ ಮನವಿ

error: Content is protected !!
Scroll to Top