(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.19. ಹಂಗಾಮಿ ಸ್ಪೀಕರ್ ಆಗಿ ಕೆ.ಜಿ. ಭೋಪಯ್ಯರ ನೇಮಕವನ್ನು ವಿರೋಧಿಸಿ ಸುಪ್ರೀಮ್ ಕೋರ್ಟ್ ಮೊರೆ ಹೋಗಿದ್ದ ಕಾಂಗ್ರೆಸ್ ಪಕ್ಷದ ಅರ್ಜಿಯನ್ನು ಪರಿಶೀಲಿಸಿದ ಸುಪ್ರೀಮ್ ಕೋರ್ಟ್ ತ್ರಿಸದಸ್ಯ ಪೀಠವು, ಒಂದು ವೇಳೆ ಹಂಗಾಮಿ ಸ್ಪೀಕರನ್ನು ಬದಲಾಯಿಸಬೇಕೆಂದಿದ್ದರೆ, ಇಂದು ನಡೆಯಲಿರುವ ವಿಶ್ವಾಸಮತ ಯಾಚನೆಯನ್ನು ಮುಂದೂಡಬೇಕಾಗುತ್ತದೆ ಎಂದಿದ್ದು, ಅರ್ಜಿಯನ್ನು ತಳ್ಳಿಹಾಕಿದೆ.
ಸುಪ್ರೀಮ್ ಕೋರ್ಟ್ ನ ಈ ನಿಲುವಿನಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಅಡಕತ್ತರಿಯಲ್ಲಿ ಸಿಲುಕಿದೆ. ಅಲ್ಲದೆ ಕಾಂಗ್ರೆಸ್ ನ ಆನಂದ ಸಿಂಗ್ ಹಾಗೂ ಪ್ರತಾಪ್ ಗೌಡ ಪಾಟೀಲ್ ಗೈರು ಹಾಜರಾಗಿದ್ದು, ಬಿಜೆಪಿಯು ಗೆಲುವಿನ ವಿಶ್ವಾಸದಲ್ಲಿದೆ. ಇನ್ನೊಂದೆಡೆ ಪಕ್ಷೇತರ ಇಬ್ಬರು ಶಾಸಕರು ಕಾಂಗ್ರೆಸ್ ಜೊತೆಗಿದ್ದು, ಡಿ.ಕೆ.ಶಿವಕುಮಾರ್ ಪ್ಲಾನ್ ವರ್ಕೌಟ್ ಆಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.