ನಾಪತ್ತೆಯಾಗಿದ್ದ ಬಳ್ಳಾರಿಯ ಕಾಂಗ್ರೆಸ್ ಶಾಸಕ ಕೊನೆಗೂ ಪತ್ತೆ..! ► ಶಾಸಕ ಆನಂದ ಸಿಂಗ್ ಬೆಂಬಲ ಯಾವ ಪಕ್ಷಕ್ಕೆ ಗೊತ್ತೇ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.17. ಕ್ಷಣ ಕ್ಷಣವೂ ತೀವ್ರ ಕುತೂಹಲ‌ ಉಂಟು ಮಾಡುತ್ತಿರುವ ರಾಜ್ಯ ರಾಜಕೀಯ ಬೆಳವಣಿಗೆಯಲ್ಲಿ ನಿನ್ನೆಯಿಂದ ಕಣ್ಮರೆಯಾಗಿದ್ದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್‌ ಕೊನೆಗೂ ತನ್ನ ಇರುವಿಕೆಯನ್ನು ಗೊತ್ತುಪಡಿಸಿದ್ದಾರೆ.

ಬಹುಮತ ಸಾಬೀತುಪಡಿಸುವ ನಿಟ್ಟಿನಲ್ಲಿ ಬಿಜೆಪಿಯು ಕಾರ್ಯತಂತ್ರಗಳನ್ನು ರೂಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ತಮ್ಮ ಶಾಸಕರನ್ನು ರೆಸಾರ್ಟ್ ನಲ್ಲಿ ಇರಿಸಿ ಕುದುರೆ ವ್ಯಾಪಾರದ ಆಮಿಷಕ್ಕೆ ಬಲಿಯಾಗದಂತೆ ನೋಡಿಕೊಳ್ಳುತ್ತಿದ್ದುರೂ ನಿನ್ನೆಯಿಂದ ಯಾರ ಕಣ್ಣಿಗೂ ಸಿಗದೆ ನಾಪತ್ತೆಯಾಗಿದ್ದ ಬಳ್ಳಾರಿಯ ಕಾಂಗ್ರೆಸ್ ಶಾಸಕ ಆನಂದ ಸಿಂಗ್ ಆಪರೇಶನ್ ಕಮಲಕ್ಕೆ ಬಲಿಯಾಗಿದ್ದಾರೆಂದು ನಂಬಲಾಗಿತ್ತು. ಆದರೆ ಗುರುವಾರ ಸಂಜೆ ವೇಳೆಗೆ ಆನಂದ್ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಸಹಿ‌ಹಾಕಿದ ಪತ್ರವನ್ನು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ರಣ್ ದೀಪ್ ಸುರ್ಜೆವಾಲಾ ಅವರಿಗೆ ತಲುಪಿಸಿದ್ದು, ಇದರೊಂದಿಗೆ ಆನಂದ ಸಿಂಗ್ ಬಿಜೆಪಿ ಮಾತೃಪಕ್ಷ ಬಿಜೆಪಿಗೆ ಸೇರಿಯೇ ಬಿಟ್ಟರು ಎಂಬ ಬಿಜೆಪಿಯ ಸಂತಸಕ್ಕೆ ನಿರಾಶೆಯಾಗಿದೆ.

Also Read  ? ಒಂಟಿ ಸಲಗದ ದಾಳಿಗೆ ವ್ಯಕ್ತಿ ಮೃತ್ಯು..!

error: Content is protected !!
Scroll to Top