ಬಂಟ್ವಾಳ ಗಲಭೆ ಹಿನ್ನೆಲೆಯಲ್ಲಿ ಪ್ರತ್ಯೇಕ ಸೈಬರ್‍ಸೆಲ್ ತಂಡ ರಚನೆ ► ವಾಟ್ಸ್ಅಪ್‍ಗಳಲ್ಲಿ ಪ್ರಚೋದನಕಾರಿ ಸಂದೇಶ ಕಳುಹಿಸಿದರೆ ಅಡ್ಮಿನ್‍ಗಳು ಜೈಲಿಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.09. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ, ಸುಳ್ಳು ಮೆಸೇಜ್‌ಗಳನ್ನು ಕಳುಹಿಸುವವರ ಪತ್ತೆ ಹಚ್ಚಲು ಪ್ರತ್ಯೇಕ ಸೈಬರ್ ಸೆಲ್ ತಂಡ ರಚಿಸಲಾಗಿದೆ. ವಾಟ್ಸ್‌ಅಪ್‌ನಲ್ಲಿ ಪ್ರಚೋದನಕಾರಿ ಮೆಸೇಜ್ ಯಾರು ಕಳುಹಿಸಿದರೂ ಅಡಿಮಿನ್ ಹೊಣೆಯಾಗುತ್ತಾನೆ ಎಂದು ಎಂದು ಪಶ್ಚಿಮ ವಲಯ ಐಜಿಪಿ ಪಿ.ಹರಿಶೇಖರನ್ ಎಚ್ಚರಿಸಿದ್ದಾರೆ.

ಅವರು ಭಾನುವಾರದಂದು ಬಂಟ್ವಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಂಟ್ವಾಳ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೀಗ ಪರಿಸ್ಥಿತಿ ಶಾಂತವಾಗಿದೆ. ಯಾವುದೇ ಅಹಿತಕರ ಕ್ರಮ ನಡೆಯದಂತೆ ಜಾಗ್ರತೆ ವಹಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ 1000ಕ್ಕೂ ಅಧಿಕ ಪೊಲೀಸರನ್ನು ದಕ್ಷಿಣ ಕನ್ನಡಕ್ಕೆ ಕರೆಸಲಾಗಿದೆ. ಜಿಲ್ಲೆಯ ಆಯಕಟ್ಟಿನ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.

error: Content is protected !!

Join the Group

Join WhatsApp Group