(ನ್ಯೂಸ್ ಕಡಬ) newskadaba.com ಕಡಬ, ಮೇ.13. ಠಾಣಾ ವ್ಯಾಪ್ತಿಯ ನೆಕ್ಕಿತ್ತಡ್ಕ ಎಂಬಲ್ಲಿ ರಿಕ್ಷಾ ಚಾಲಕನೋರ್ವನಿಗೆ ತಂಡವೊಂದು ಬರ್ಬರವಾಗಿ ಇರಿದು ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಸ್ಪೋಟಕ ಸುದ್ದಿಯೊಂದು ತಿಳಿದುಬಂದಿದೆ.
ಇರಿತಕ್ಕೊಳಗಾದ ರಿಕ್ಷಾ ಚಾಲಕ ಐತ್ತೂರು ಗ್ರಾಮದ ಕೇನ್ಯ ನಿವಾಸಿ ಉಮೇಶ್ (30) ಹೇಳಿಕೆ ನೀಡಿದ್ದು, ಕಡಬದಿಂದ ಮರ್ಧಾಳಕ್ಕೆ ತಾನು ರಿಕ್ಷಾದಲ್ಲಿ ತೆರಳುತ್ತಿದ್ದಾಗ ಮೂರು ಜನರ ತಂಡವೊಂದು ಕಂದು ಬಣ್ಣದ ಆಲ್ಟೋ ಕಾರಿನಲ್ಲಿ ಬಂದು ಅಡ್ಡಗಟ್ಟಿ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಅಷ್ಟರಲ್ಲಿ ಮಹಿಳೆಯೋರ್ವರು ತಲವಾರು ತೆಗೆದುಕೊಂಡು ಕಾರಿನಿಂದ ಇಳಿಯುತ್ತಿರುವುದನ್ನು ಕಂಡು ತಪ್ಪಿಸಿಕೊಂಡ ತನ್ನನ್ನು ಸುಮಾರು 200 ಮೀಟರ್ ದೂರದವರೆಗೆ ಓಡಿಸಿ ತಲೆಗೆ ರಾಡ್ ನಿಂದ ಹಲ್ಲೆ ನಡೆಸಿ ಬೆನ್ನಿಗೆ ತಲವಾರು ಬೀಸಿದ್ದಾರೆ. ತಾನು ಕೆಳಗಡೆ ಬಿದ್ದ ನಂತರ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಆಸ್ಪತ್ರೆಗೆ ಸೇರಿಸಿದ ಅಬ್ಬಾಸ್ ಹಾಗೂ ನಝೀರ್ ರವರಲ್ಲಿ ಹೇಳಿಕೆ ನೀಡಿದ್ದಾರೆ.