(ನ್ಯೂಸ್ ಕಡಬ) newskadaba.com ಕಡಬ, ಮೇ.13. ರಿಕ್ಷಾ ಚಾಲಕನೋರ್ವನಿಗೆ ತಂಡವೊಂದು ಬರ್ಬರವಾಗಿ ಇರಿದು ಪರಾರಿಯಾದ ಘಟನೆ ಇಲ್ಲಿನ ನೆಕ್ಕಿತ್ತಡ್ಕ ಎಂಬಲ್ಲಿ ಭಾನುವಾರ ಅಪರಾಹ್ನ ನಡೆದಿದೆ.
ಇರಿತಕ್ಕೊಳಗಾದ ರಿಕ್ಷಾ ಚಾಲಕನನ್ನು ಮರ್ಧಾಳ ನಿವಾಸಿ ಉಮೇಶ್ ಎಂದು ಗುರುತಿಸಲಾಗಿದೆ. ಈತ ಕಡಬದಿಂದ ಮರ್ಧಾಳ ಕಡೆಗೆ ತನ್ನ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಬಾಜಿನಡಿ ಕ್ರಾಸ್ ಎಂಬಲ್ಲಿ ಕೆಂಪು ಕಾರಿನಲ್ಲಿ ಬಂದ ತಂಡವೊಂದು ರಿಕ್ಷಾವನ್ನು ಅಡ್ಡಗಟ್ಟಿದ್ದು, ಅವರಿಂದ ಸುಮಾರು 200 ಮೋಟರ್ ದೂರ ಓಡಿ ತಪ್ಪಿಸಿಕೊಂಡನಾದರೂ ನೆಕ್ಕಿತ್ತಡ್ಕ ದರ್ಗಾ ಬಳಿ ತಂಡವೊಂದು ಹಿಗ್ಗಾಮುಗ್ಗಾ ಇರಿದಿದು ಪರಾರಿಯಾಗಿದೆ. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಕಡಿದು ಕೊಲೆಗೆ ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಅಡಿಷನಲ್ ಎಸ್ಪಿ ಸಜಿತ್, ಡಿವೈಎಸ್ಪಿ ಶ್ರೀನಿವಾಸ್, ಕಡಬ ಪೊಲೀಸ್ ಠಾಣಾ ಉಪ ನಿರೀಕ್ಷಕ ಪ್ರಕಾಶ್ ದೇವಾಡಿಗ, ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್, ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಕೈಕುರೆ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.