ಹಬ್ಬದ ದಿನವೇ ಬಾರದ ಲೋಕಕ್ಕೆ ಪಯಣ ಬೈಕ್-ಟಿಪ್ಪರ್ ನಡುವೆ ಅಪಘಾತ, ಸ್ಥಳದಲ್ಲೇ ದಂಪತಿ ಮೃತ್ಯು



(ನ್ಯೂಸ್‌ ಕಡಬ) newskadaba.com,ಮಾ.19 ಯುಗಾದಿ ಹಬ್ಬದಂದೇ ಬೀದರ್‌ನಲ್ಲಿ  ಭೀಕರವಾದ ಅಪಘಾತ ಸಂಭವಿಸಿದ್ದು, ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ಚಲಿಸುತ್ತಿದ್ದ ದಂಪತಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ನಡೆದಿದೆ.





ಮೃತ ದಂಪತಿಗಳನ್ನು ಬಸವಕಲ್ಯಾಣ ನಗರದ ಖಡಿ ಝಂಡಾ ಕಾಲೋನಿಯ ನಿವಾಸಿ ಸೈಯದ್ ದಸ್ತಗೀರ್ (35) ಮತ್ತು ಅವರ ಪತ್ನಿ ಯಾಸ್ಮೀನ್ ದಸ್ತಗೀರ್ (33) ಎಂದು ಗುರುತಿಸಲಾಗಿದೆ. ತ್ರಿಪುರಾಂತ ಬಳಿಯ ಕಾಲೋನಿಯೊಂದರಲ್ಲಿ ವಾಸಿಸುತ್ತಿದ್ದ ಮೃತರು, ಬೈಕ್​ನಲ್ಲಿ ಬಸ್ ನಿಲ್ದಾಣ ಕಡೆಯಿಂದ ಖಡಿ ಝಂಡಾ ಕಾಲೋನಿಯತ್ತ ತೆರಳುತ್ತಿದ್ದಾಗ ಈ ಅವಘಡ ನಡೆದಿದೆ.






ಮಾಹಿತಿ ತಿಳಿಯುತ್ತಿದ್ದಂತೆ ಅಪಘಾತ ಸ್ಥಳಕ್ಕೆ ಬಸವಕಲ್ಯಾಣ ಸಿಪಿಐ ಅಲಿಸಾಬ್, ಸಂಚಾರ ಠಾಣೆ ಪಿಎಸ್‌ಐ ಸಿದ್ದೇಶ್ವರ ಹಾಗೂ ನಗರ ಠಾಣೆ ಪಿಎಸ್‌ಐ ಚಂದ್ರಶೇಖರ್ ನಾರಾಯಣಪುರ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top