ಬಾವಿಗೆ ಬಿದ್ದ ಎರಡು ವರ್ಷದ ಮಗು- ರಕ್ಷಣೆ



(ನ್ಯೂಸ್‌ ಕಡಬ) newskadaba.com ಮಾ. 17. ಆಟವಾಡುತ್ತಾ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಎರಡು ವರ್ಷದ ಬಾಲಕಿಯನ್ನು ವ್ಯಕ್ತಿಯೋರ್ವ ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಕಸ್ತೂರಬಾ ನಗರದಲ್ಲಿ ನಡೆದಿದೆ.





ಭುವಿ (2) ಬಾವಿಗೆ ಬಿದ್ದು ಅದೃಷ್ಟವಶಾತ್ ಬದುಕುಳಿದ ಬಾಲಕಿಯಾಗಿದ್ದಾಳೆ. ಮನೆಯಲ್ಲಿ ಮಗು ಕಾಣದಿದ್ದಾಗ ಆತಂಕಗೊಂಡ ಅಜ್ಜಿ ಸುತ್ತಮುತ್ತ ಹುಡುಕಾಡಿದಾಗ ಬಾವಿಯ ಬಳಿ ಅಳುವಿನ ಶಬ್ದ ಕೇಳಿಬಂದಿದೆ. ಆತಂಕದೊಂದಿಗೆ ಬಾವಿಯೊಳಗೆ ಇಣುಕಿ ನೋಡಿದಾಗ, ಮಗು ನೀರಿಗೆ ಇಳಿಸಲಾಗಿದ್ದ ಪಂಪ್ ಪೈಪ್‌ನ್ನು ಗಟ್ಟಿಯಾಗಿ ಹಿಡಿದುಕೊಂಡು ಅಳುತ್ತಿರುವುದು ಕಂಡುಬಂದಿದೆ.






ಈ ಸುದ್ದಿ ತಿಳಿಯುತ್ತಿದ್ದಂತೆಯೇ ಹತ್ತಿರದಲ್ಲೇ ವಾಸವಿರುವ ಪಯಾಜ್‌ ಚೌಟಿ ಎಂಬವರು ತಕ್ಷಣ ಸ್ಥಳಕ್ಕೆ ಧಾವಿಸಿ ಬಾವಿಗೆ ಹಗ್ಗದ ಸಹಾಯದಿಂದ ಇಳಿದು ರಕ್ಷಣೆ ಮಾಡಿದ್ದಾರೆ.

 

error: Content is protected !!
Scroll to Top