ಮೊಬೈಲ್ ಕ್ಯಾಂಟೀನ್ ಖರೀದಿಸಲು ಅರ್ಜಿ ಆಹ್ವಾನ



(ನ್ಯೂಸ್ ಕಡಬ) newskadaba.com ಮಾ. 17. 2025-26 ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಮೊಬೈಲ್ ಕ್ಯಾಂಟೀನ್ ಖರೀದಿಸಲು ಸಹಾಯ ಕಾರ್ಯಕ್ರಮದಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಅರ್ಜಿದಾರರು ಅರ್ಜಿ ನಮೂನೆಯನ್ನು ಪಡೀಲ್ `ಪ್ರಜಾ ಸೌಧ’ ದಕ್ಷಿಣ ಕನ್ನಡ ಜಿಲ್ಲಾ ಆಡಳಿತ ಕೇಂದ್ರದಲ್ಲಿರುವ  ಪ್ರವಾಸೋದ್ಯಮ ಇಲಾಖೆ  ಉಪ ನಿರ್ದೇಶಕರ ಕಛೇರಿಯಿಂದ ಪಡೆಯಬಹುದು.
ಸಹಾಯ ಕಾರ್ಯಕ್ರಮದಡಿ ಮೊಬೈಲ್ ಕ್ಯಾಂಟೀನ್ ಖರೀದಿಸಲು ಅರ್ಜಿ ಸಲ್ಲಿಸಲು ಏಪ್ರಿಲ್ 6  ಕೊನೆಯ ದಿನ. ಹೆಚ್ಚಿನ ಮಾಹಿತಿಗೆ 0824-2453926/ 9844535509 ಅಥವಾ adtourismmangalore@gmail.com  ಸಂಪರ್ಕಿಸಬಹುದು ಎಂದು  ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





error: Content is protected !!
Scroll to Top