ಮಂಗಳೂರು: ಕಸ ಸ್ವಚ್ಛಗೊಳಿಸುವಾಗ ಹಗ್ಗ ತುಂಡಾಗಿ ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ



(ನ್ಯೂಸ್‌ ಕಡಬ) newskadaba.com,  ಮಾ.17 ಕಸವನ್ನು ಸ್ವಚ್ಛಗೊಳಿಸುವ ವೇಳೆ ಹಗ್ಗ ತುಂಡಾಗಿ ಬಾವಿಗೆ ಬಿದ್ದ ವ್ಯಕ್ತಿಯೋರ್ವರನ್ನು ರಕ್ಷಿಸಿದ ಘಟನೆ ಮಂಗಳೂರು ನಗರದ ಬೋಳಾರದ ಮುಳಿಹಿತ್ತಲು ಬಳಿ ನಡೆದಿದೆ.





ಬೆಳಗಾವಿಯ ಸವದತ್ತಿ ತಾಲೂಕಿನ ಪಂಚಪ್ಪ(44) ಎಂಬುವವರು ಬಾವಿಯ ಸುತ್ತಮುತ್ತಲಿನ ಕಸವನ್ನು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಹಗ್ಗ ತುಂಡಾಗಿ ಬಾವಿಗೆ ಬಿದ್ದಿದ್ದಾರೆ.






ಬಳಿಕ ಅವರನ್ನು ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಅಧಿಕಾರಿ ಹಾಗು ಸಿಬ್ಬಂದಿಯವರು ಬಾವಿಗೆ ಇಳಿದು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಗಾಯಾಳುವನ್ನು ಆಂಬುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

error: Content is protected !!
Scroll to Top