ನೆಲ್ಯಾಡಿ ನಿವಾಸಿ ಉಡುಪಿಯಲ್ಲಿ ಆತ್ಮಹತ್ಯೆ..!



(ನ್ಯೂಸ್ ಕಡಬ) newskadaba.com ಮಾ. 17. ಕಡಬ ತಾಲೂಕಿನ ನೆಲ್ಯಾಡಿ ನಿವಾಸಿಯೊಬ್ಬರು ಉಡುಪಿ ನಗರದ ಹಳೆ ಸರಕಾರಿ ಬಸ್ಸು ನಿಲ್ದಾಣ ಸಮೀಪದ ವಸತಿ ಗೃಹದ ಬಾಡಿಗೆ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ವರದಿಯಾಗಿದೆ.





ಆತ್ಮಹತ್ಯೆ ಮಾಡಿಕೊಂಡವರನ್ನು ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಹೊಸಮಜಲು ಗುಡ್ಡೆ ನಿವಾಸಿ ಮಥಾಯಿ ಅವರ ಪುತ್ರ ಜಿನ್ಸನ್‌ ಪಿ ಎಂ ಎಂದು ಗುರುತಿಸಲಾಗಿದೆ.






ಮಂಗಳೂರು ಬರ್ಕೆಯ ಕೋಸ್ಟಲ್‌ ಗಾರ್ಡ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಜಿನ್ಸನ್‌ ಅವರು ಪತ್ನಿ ಇಬ್ಬರು ಮಕ್ಕಳ ಜೊತೆ ಅಲ್ಲೇ ವಾಸವಾಗಿದ್ದರು. ಮಾ.14 ರಂದು ಮಧ್ಯಾಹ್ನ ಮಂಗಳೂರಿನ ಮನೆಯಿಂದ ಉಡುಪಿಗೆ ತೆರಳಿದ್ದ ಜಿನ್ಸನ್‌ ಪಿ.ಎಂ. ಅವರು ಉಡುಪಿ ನಗರದ ಹಳೆ ಸರಕಾರಿ ಬಸ್ಸು ನಿಲ್ದಾಣದ ಸಮೀಪದ ವಸತಿ ಗೃಹದಲ್ಲಿ ಕೊಠಡಿ ಬಾಡಿಗೆ ಪಡೆದುಕೊಂಡಿದ್ದರು. ಮಾ 15 ರಂದು ಮಧ್ಯಾಹ್ನದವರೆಗೂ ವಸತಿಗೃಹದ ಬಾಗಿಲು ತೆರೆಯದ ಕಾರಣ ರೂಂ ಬಾಯ್‌ ಪರಿಶೀಲನೆ ಮಾಡಲೆಂದು ಹೋದಾಗ ಜಿನ್ಸನ್‌ ಫ್ಯಾನಿಗೆ ನೇಣು ಬಿಗಿದಿರುವುದು ಕಂಡು ಬಂದಿದೆ ಎನ್ನಲಾಗಿದೆ.

ನಂತರ ಜಿನ್ಸನ್‌ ಅವರ ಮೊಬೈಲ್‌ನಲ್ಲಿದ್ದ ಅವರ ತಾಯಿಯ ಫೋನ್‌ ನಂಬರ್‌ಗೆ ಕರೆ ಮಾಡಿ ಉಡುಪಿ ಪೊಲೀಸರು ಘಟನೆ ಕುರಿತು ಮಾಹಿತಿ ನೀಡಿದ್ದರು. ವೈಯಕ್ತಿಕ ಕಾರಣದಿಂದ ಜಿನ್ಸನ್‌

error: Content is protected !!
Scroll to Top