SSF ತೆಕ್ಕಾರು ವತಿಯಿಂದ ಬೃಹತ್ ಇಫ್ತಾರ್ ಕೂಟ ಮತ್ತು ಪ್ರಾರ್ಥನಾ ಸಂಗಮ ಯುವ ಸಮೂಹವನ್ನು ಆದ್ಯಾತ್ಮಿಕತೆಯೆಡೆಗೆ ಕೊಂಡೊಯ್ಯುವ ಸಂಘಟನೆಗಳ ಪಾತ್ರ ಮಹತ್ವದ್ದು- ಮಜೀದ್ ಸಖಾಫಿ ಅಮ್ಮುoಜೆ



(ನ್ಯೂಸ್ ಕಡಬ) newskadaba.com  ಉಪ್ಪಿನಂಗಡಿ, ಮಾ. 17. SSF ತೆಕ್ಕಾರು ಯುನಿಟ್ ವತಿಯಿಂದ ಬೃಹತ್ ಇಫ್ತಾರ್ ಕೂಟ ಹಾಗೂ ಪ್ರಾರ್ಥನಾ ಸಂಗಮ ಕಾರ್ಯಕ್ರಮ ಸೋಮವಾರದಂದು ಸಂಜೆ ಭಕ್ತಿಭಾವದಿಂದ ನಡೆಯಿತು. ರಮಳಾನ್ ನ ಆತ್ಮೀಯತೆಯ ವಾತಾವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯುವಕರು ಮತ್ತು ಸ್ಥಳೀಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.





 

ಪ್ರಾರ್ಥನಾ ಸಂಗಮಕ್ಕೆ ನೇತೃತ್ವ ನೀಡಿದ ಖತೀಬ್ ಅಬ್ದುಲ್ ಮಜೀದ್ ಸಖಾಫಿ ಅಮ್ಮುಂಜೆ ಮಾತನಾಡಿ, ಯುವ ಸಮೂಹವನ್ನು ಅಧ್ಯಾತ್ಮಿಕತೆಯತ್ತ ಕೊಂಡೊಯ್ಯುವಲ್ಲಿ ಸಂಘಟನೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಸಹೋದರತ್ವ, ಸೌಹಾರ್ದತೆ ಮತ್ತು ಧಾರ್ಮಿಕ ಮೌಲ್ಯಗಳನ್ನು ಬಲಪಡಿಸುತ್ತವೆ ಎಂದರು.






 

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಇಸ್ಹಾಕ್ ಮದನಿ ಅಳಕೆ, ಉಸ್ಮಾನ್ ಸಹದಿ ತೆಕ್ಕಾರು, ಬಶೀರ್ ಮದನಿ ಸೆರ್ಕಳ ಹಾಗೂ ಜಮಾಅತ್ ಕಾರ್ಯದರ್ಶಿ ನಝಿರ್ ಟಿ.ಕೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು. SSF ತೆಕ್ಕಾರು ಯುನಿಟ್ ಅಧ್ಯಕ್ಷ ಜಾಫರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಸೆಕಿರ್ ಮಾಸ್ಟರ್ ಸ್ವಾಗತಿಸಿದರು. ಕಾರ್ಯದರ್ಶಿ ನಸೀಫ್ ವಂದಿಸಿದರು.

error: Content is protected !!
Scroll to Top