ಕಡಬದ ಯುವಕ ಐರ್ಲೆಂಡ್ ನಲ್ಲಿ ನಿಗೂಢವಾಗಿ ಮೃತಪಟ್ಟ ಪ್ರಕರಣ ನ್ಯಾಯಕ್ಕಾಗಿ ಆಗ್ರಹಿಸಿ ಮೊಂಬತ್ತಿ ಮೆರವಣಿಗೆ



(ನ್ಯೂಸ್ಕಡಬ) newskadaba.com ಮಾ. 16. ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿ ಕೇವಲ 28 ದಿನಗಳಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಕಡಬ ಮೂಲದ ಯುವಕನ ಸಾವಿನ ಹಿಂದಿರುವ ರಹಸ್ಯ ಬಯಲಾಗಬೇಕು ಮತ್ತು ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಭಾನುವಾರದಂದು ಕಡಬದಲ್ಲಿ ಮೊಂಬತ್ತಿ ಮೆರವಣಿಗೆಯ ಮೂಲಕ ಪ್ರತಿಭಟಿಸಲಾಯಿತು.





 

ಕಡಬ ತಾಲೂಕಿನ ಕುಟ್ರುಪಾಡಿ ನಿವಾಸಿ ಸ್ಯಾಂಜೋ ಸುನಿಲ್ (31) ಎಂಬಾತ ಕಳೆದ ಫೆಬ್ರವರಿ ತಿಂಗಳಲ್ಲಿ ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಮೃತದೇಹವು ಕಳೆದ ವಾರವಷ್ಟೇ ತಾಯ್ನಾಡಿಗೆ ತಲುಪಿ ಅಂತ್ಯಕ್ರಿಯೆ ನಡೆದಿದ್ದರೂ, ಪತ್ನಿಯೊಂದಿಗೆ ಐರ್ಲೆಂಡ್‌ನಲ್ಲಿ ವಾಸವಿದ್ದ ಸ್ಯಾಂಜೋ ಅವರ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಪ್ರಶ್ನೆ ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ನಿಗೂಢ ಸಾವಿನ ತನಿಖೆ ಚುರುಕುಗೊಳ್ಳಬೇಕು ಎಂದು ಒತ್ತಾಯಿಸಿ ಇಂದು ಸಂಜೆ ಕಡಬ ಕ್ರಿಶ್ಚಿಯನ್ ಲೈಟ್ನಿಂಗ್ ಕ್ಲಬ್ (ರಿ.) ಮತ್ತು ಕಡಬ ಮಲಯಾಳಿ ಫ್ರೆಂಡ್ಸ್ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಮೊಂಬತ್ತಿ ಮೆರವಣಿಗೆ ನಡೆಸಯಿತು.






error: Content is protected !!
Scroll to Top