(ನ್ಯೂಸ್ ಕಡಬ) newskadaba.com, ಮಾ.16: ನಿನ್ನೆ((ಮಾ.15) ಗುತ್ತಿಗಾರು, ನಡುಗಲ್ಲು, ಹರಿಹರ ಪಳ್ಳತ್ತಡ್ಕ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು ಹಾಗೂ ಸುಬ್ರಹ್ಮಣ್ಯ, ಐನೆಕಿದು ಸೇರಿದಂತೆ ಸುಳ್ಯ ಹಾಗೂ ಕಡಬ ತಾಲೂಕಿನ ಹಲವು ಭಾಗಗಳಲ್ಲಿ ಸಂಜೆಯ ವೇಳೆಗೆ ಮಳೆಯಾಗಿದ್ದು, ಬಾಳುಗೋಡು ಹಾಗೂ ಐನೆಕಿದು ಪರಿಸರದಲ್ಲಿ ಮಳೆಯ ಜೊತೆಗೆ ಬಾರೀ ಪ್ರಮಾಣದಲ್ಲಿ ಗಾಳಿ ಕೂಡ ಬೀಸಿದ್ದು, ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ ಎಂದು ತಿಳಿದುಬಂದಿದ್ದು, ಹಲವೆಡೆ ಮರಗಳು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿವೆ ಎಂದು ತಿಳಿದುಬಂದಿದೆ. ಅದೇ ರೀತಿ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಬೀಸಿದ ಗಾಳಿಯ ಪರಿಣಾಮವಾಗಿ ಸವಾರಿ ಮಂಟಪದಿಂದ ದೇವರಗದ್ದೆ ಕಡೆಗೆ ತೆರಳುವ ರಸ್ತೆಯ ಬದಿಯಲ್ಲಿ ಇದ್ದಂತಹ ಬೃಹದಾಕಾರದ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿದೆ ಎಂದು ತಿಳಿದುಬಂದಿದ್ದು, ಇಂದು ಬೀಸಿದ ಈ ಗಾಳಿಗೆ ಇನ್ನೂ ಎಲ್ಲೆಲ್ಲಿ ಹಾನಿಗಳು ಸಂಭವಿಸಿವೆ ಎಂಬುವುದು ಇನ್ನಷ್ಟೇ ತಿಳಿದುಬರಬೇಕಿದೆ..
ಸುಳ್ಯ–ಕಡಬ ಭಾಗದಲ್ಲಿ ಮಳೆಗಾಳಿ ತೀವ್ರತೆ: ಬಾಳುಗೋಡು, ಐನೆಕಿದು ಪ್ರದೇಶದಲ್ಲಿ ಭಾರೀ ಗಾಳಿ








