(ನ್ಯೂಸ್ ಕಡಬ) newskadaba.com, ಮಾ.11: ಬಿಕರ್ನಕಟ್ಟೆ ಬಳಿ ಮಾದಕ ವಸ್ತು ಸೇವನೆ ಮಾಡಿದ ಆರೋಪಿಯನ್ನು ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳ ಕೋಯಿಕ್ಕೋಡ್ ಜಿಲ್ಲೆಯ ಪೆರಂಬರ ಕೋರನ್ಕಂಡಿ ಮೀಥಲ್ ನಿವಾಸಿ ಮೊಹಮ್ಮದ್ ಶಾಮಿಲ್ (21) ಬಂಧಿತ ಆರೋಪಿ. ಪೊಲೀಸರು ಗಸ್ತಿನಲ್ಲಿರುವಾಗ ಸೋಮವಾರ ರಾತ್ರಿ 10 ಗಂಟೆ ವೇಳೆಗೆ ಬಿಕರ್ನಕಟ್ಟೆ ಬಳಿ ಮಾದಕ ವಸ್ತು ಸೇವಿಸಿದಂತೆ ಕಂಡು ಬಂದ ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ದೃಢಪಟ್ಟಿದೆ. ಈತನ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








