(ನ್ಯೂಸ್ ಕಡಬ) newskadaba.com, ಮಾ.11: ಇರಾನ್-ಇಸ್ರೇಲ್ ಹಾಗೂ ಅಮೆರಿಕ ಸಂಘರ್ಷದ ಹಿನ್ನೆಲೆ, ಚಿನ್ನ ಬೆಳ್ಳಿ ಸುರಕ್ಷಿತ ಹೂಡಿಕೆಯತ್ತ ಬೇಡಿಕೆ ಹೆಚ್ಚಾಗಿರುವುದರಿಂದ ಚಿನ್ನ ಬೆಳ್ಳಿ ದರ ಏರಿಕೆಯಾಗಿದೆ.ಮಾರ್ಚ್ 11, 2026, ಬುಧವಾರದಂದು 24 ಕ್ಯಾರೆಟ್ 10 ಗ್ರಾಂ ನಲ್ಲಿ 930 ರೂ ಏರಿಕೆ ಆಗಿ 1,63,310 ಕ್ಕೆ ಏರಿಕೆಯಾಗಿದೆ. 1 ಗ್ರಾಂ ಬೆಲೆ ಇಂದು 93 ರೂ ಹೆಚ್ಚಳ ಕಂಡಿದ್ದು, 16,331 ರೂ ದಾಖಲಾಗಿದೆ.
22 ಕ್ಯಾರೆಟ್ 1 ಗ್ರಾಂ ಬೆಲೆ 85 ರೂ ಏರಿಕೆ ಆಗಿ 14,970 ರೂ ಆಗಿದ್ದು 10 ಗ್ರಾಂ ಬೆಲೆ 1,49,700 ರೂಪಾಯಿಗೆ ತಲುಪಿದೆ.ಬೆಳ್ಳಿ ಬೆಲೆ ಇಂದು ತಟಸ್ಥವಾಗಿದ್ದು, ಕೆಜಿ ಬೆಲೆ ಮಂಗಳವಾರ ಇದ್ದ 2,90,000 ರೂ ಬೆಲೆಯೇ ಮುಂದುವರಿದಿದೆ. ದಾಖಲಾಗಿದೆ.
ಚಿನ್ನ-ಬೆಳ್ಳಿ ಬೆಲೆ ಏರಿಳಿತ
ಇರಾನ್-ಅಮೆರಿಕ ಸಂಘರ್ಷದ ಹಿನ್ನೆಲೆಯಲ್ಲಿ , ಡಾಲರ್ ಬೆಲೆ ಏರಿಳಿತ ಸೇರಿದಂತೆ ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರಿ ಏರುಪೇರಾಗುತ್ತಿದೆ.








