(ನ್ಯೂಸ್ ಕಡಬ) newskadaba.com ಕಡಬ, ಮಾ.07 ಇಸ್ರೇಲ್ ಇರಾನ್ ಯುದ್ಧದಿಂದಾಗಿ ದೇಶದಲ್ಲಿ ಅಡುಗೆ ಅನಿಲದ ದರ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದ್ದು ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ೬೦ ರೂ. ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ೧೧೫ ರೂ. ಏರಿಕೆಯಾಗಿದೆ. ಅಡುಗೆ ಅನಿಲದ ಈ ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ.ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಎಲ್ಪಿಜಿ ದರ ಏರಿಕೆಯಾಗುತ್ತಿರುವುದು ಇದು ೨ನೇ ಭಾರಿ. ಈಗಾಗಲೇ ಅಗತ್ಯ ವಸ್ತಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಅಡುಗೆ ಅನಿಲ ದರ ಏರಿಕೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ಅಡುಗೆ ಅನಿಲ ದರ ಏರಿಕೆ ಶ್ರೀಸಾಮಾನ್ಯ ಪಾಲಿಗೆ ಹೊರೆಯಾಗಲಿದೆ.
ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್ಗಳ ತಿಂಡಿತಿನಿಸುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆಗಳು ಹೆಚ್ಚಿವೆ.ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಲ್ಬಣಗೊಂಡಿರುವ ಜಾಗತಿಕ ತೈಲ ಬಿಕ್ಕಟ್ಟಿನ ಪರಿಣಾಮವೇ ಬೆಲೆ ಏರಿಕೆ ಕಾರಣವೆಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ದೇಶದಲ್ಲಿ ಈ ಎಲ್ಪಿಜಿ ದರ ಏರಿಕೆಯೂ ಹೊರತಾಗಿಯೂ ನೆರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಎಲ್ಪಿಜಿ ದರ ಕಡಿಮೆಯಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಕಳೆದ ಏಪ್ರಿಲ್ ನಲ್ಲಿ ಅಡಿಗೆ ಅನಿಲ ಸಿಲಿಂಡರ್ ಬೆಲೆಯನ್ನು ೫೦ ರೂ.ಗಳಷ್ಟು ಏರಿಕೆ ಮಾಡಲಾಯಿತು. ಈಗ ಗೃಹ ಬಳಕೆಯ ಅಡುಗೆ ಅನಿಲದ ಸಿಲಿಂಡರ್ ಬೆಲೆ ೬೦ ರೂ. ಏರಿಕೆಯಾಗಿದ್ದು ಇಂದಿನಿಂದ ದರ ಏರಿಕೆ ಜಾರಿಗೆ ಬಂದಿದೆ.ವಾಣಿಜ್ಯ ಬಳಕೆಯ ೧೯ ಕೆಜಿ ಸಿಲಿಂಡರ್ ದರ ಈ ವರ್ಷ ೩೦೨ ರೂ. ಏರಿಕೆಯಾಗಿದೆ. ಮಾಚ್ ೧ ರಂದು ೨೮ ರೂ. ದರ ಏರಿಕೆ ಮಾಡಲಾಗಿದ್ದು, ಈಗ ಮತ್ತೇ ವಾಣಿಜ್ಯ ಬಳಕೆಯ ಸಿಲಿಂಡರ್ಗೆ ದರ ಏರಿಕೆ ೧೧೫ ರೂ. ರಷ್ಟು ಹೆಚ್ಚಾಗಿದೆ.
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪ್ರಕಾರ ದರ ಏರಿಕೆಯಿಂದ ಸಬ್ಸಡಿಯೇತರ ೧೪.೨ ಕೆಜಿ ಗೃಹ ಬಳಕೆಯ ಸಿಲಿಂಡರ್ ದೆಹಲಿಯಲ್ಲಿ ೯೧೩ ರೂ. ತಲುಪಿದೆ. ಈ ಹಿಂದೆ ಈ ದರ ೮೫೩ ಇತ್ತು. ಸ್ಥಳೀಯ ತೆರಿಗೆಗಳನ್ನು ಅವಲಂಭಿಸಿ, ರಾಜ್ಯಗಳಲ್ಲಿಅಡುಗೆ ಅನಿಲ ಸಿಲಿಂಡರ್ ದರಗಳು ಸ್ವಲ್ಪ ಭಿನ್ನವಾಗಿತ್ತು. ದೇಶೀಯ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಏರಿಯಾಗಿದ್ದರೂ ಇಂಧನ ಸರಬರಾಜು ಸ್ಥಿರವಾಗಿದೆ ಎಂದು ಕೇಂದ್ರ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ಧಾರೆ.ದೇಶದ ಜನರಿಗೆ ಕೈಗೆಟುಕುವ ಮತ್ತು ಸುಸ್ಥಿರ ಇಂಧನದ ಲಭ್ಯತೆ ಖಚಿತಪಡಿಸಿಕೊಳ್ಳುವುದು ಆದ್ಯತೆಯಾಗಿದೆ ದೇಶದಲ್ಲಿ ?ಲ ಇಂಧನದ ಕೊರತೆಯಿಲ್ಲ, ಇಂಧನ ಗ್ರಾಹಕರಿಗೆ ಚಿಂತೆ ಪಡುವ ಯಾವುದೇ ಲಕ್ಷಣವಿಲ್ಲ ಎಂದು ತಿಳಿಸಿದ್ಧಾರೆ.
ಭಾರತೀಯ ತೈಲ ನಿಗಮ ದೇಶದಲ್ಲಿ ಸಾಕಷ್ಟು ಇಂಧನ ದಾಸ್ತಾನುಗಳನ್ನು ಹೊಂದಿದೆ ಮತ್ತು ಪೂರೈಕೆ ಮತ್ತು ವಿತರಣಾ ಜಾಲಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ. ದೇಶಾದ್ಯಂತ ನಿರಂತರ ಇಂಧನ ಪೂರೈP ನಿರ್ವಹಿಸಲು ಭಾರತೀಯ ತೈಲ ನಿಗಮ ಬದ್ದವಾಗಿದೆ ಎಂದಿದ್ಧಾರೆ….








