ಶವಯಾತ್ರೆಯಲ್ಲಿನ ಕಲ್ಲುತೂರಾಟ ಪೂರ್ವಯೋಜಿತ ಕೃತ್ಯವೇ…? ► ಸಂಶಯಕ್ಕೆ ಕಾರಣವಾದ ವೀಡಿಯೋ ಇದೀಗ ವೈರಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು.08. ದುಷ್ಕರ್ಮಿಗಳಿಂದ ಕೊಲೆಯಾದ ಆರೆಸ್ಸೆಸ್ ಕಾರ್ಯಕರ್ತ ಶರತ್ ದೇವಾಡಿಗರ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ್ದ ಕೆಲವು ಕಿಡಿಗೇಡಿಗಳು ರಸ್ತೆಬದಿಯಲ್ಲಿನ ಕೆಲವು ಕಲ್ಲುಗಳನ್ನು ತೆಗೆದು ಕಾರಿನೊಳಗೆ ಶೇಖರಿಸುತ್ತಿರುವುದನ್ನು ಯಾರೋ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಸಂಶಯಕ್ಕೆ ಕಾರಣವಾಗಿದೆ. ಶವಯಾತ್ರೆಯಲ್ಲಿ ಕೈಕಂಬ ಹಾಗೂ ಬಿ.ಸಿ.ರೋಡಲ್ಲಿ ನಡೆದ ಕಲ್ಲು ತೂರಾಟ ಘಟನೆಯು ಹಿಂದೂ ಪರ ಸಂಘಟನೆಯ ಕೆಲವು ಗೂಂಡಾ ಪ್ರವೃತ್ತಿಯ ಕಾರ್ಯಕರ್ತರ ಪೂರ್ವಯೋಜಿತ ಕೃತ್ಯವಾಗಿರಬಹುದು ಎಂದು ಜಿಲ್ಲೆಯ ಶಾಂತಿಪ್ರಿಯ ಜನರಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಇದೀಗ ವೈರಲ್ ಆಗಿರುವ ವೀಡಿಯೋ ಪುಷ್ಠಿ ನೀಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇಂತಹ ವಿಲಕ್ಷಣ ಮನೋಭಾವದ ಗೂಂಡಾಗಳನ್ನು ಬಂಧಿಸದೆ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಸಾಧ್ಯವಿಲ್ಲ.

Also Read  ಯಕ್ಷಗಾನದ ಹೆಸರಾಂತ ಭಾಗವತ ಬಲಿಪ ನಾರಾಯಣ ನಿಧನ !!

 

error: Content is protected !!
Scroll to Top