ಒಂದನೇ ತರಗತಿಗೆ ದಾಖಲಾತಿ ವಯಸ್ಸಿನ ಮಿತಿ ಸಡಿಲ ಮಾಡಿ: ಸರ್ಕಾರಕ್ಕೆ ಪೋಷಕರ ಮನವಿ



(ನ್ಯೂಸ್‌ ಕಡಬ) newskadaba.com,ಮಾ.02 ಬೆಂಗಳೂರು: ಒಂದನೇ ತರಗತಿಗೆ ದಾಖಲಾಗುವ 6 ವರ್ಷ ವಯಸ್ಸಿನ ಮಿತಿಯನ್ನ ಈ ವರ್ಷವೂ ಸಡಿಲ ಮಾಡಬೇಕು ಎಂದು ಮತ್ತೆ ಪೋಷಕರು ಸರ್ಕಾರವನ್ನ ಒತ್ತಾಯಿಸಿದ್ದಾರೆ. ವಯಸ್ಸಿನ ಮಿತಿ ಸಡಿಲ ಮಾಡುವಂತೆ ಒತ್ತಾಯಿಸಿ ಪೋಷಕರು ಮತ್ತು ವಿದ್ಯಾರ್ಥಿಗಳು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ‌ಮನವಿ ಮಾಡಿದರು. ಮಕ್ಕಳು ಪೋಸ್ಟರ್ ಹಿಡಿದು ವಯಸ್ಸಿನಲ್ಲಿ ಮಿತಿ ಸಡಿಲ ಮಾಡಿ ಎಂದು ಮನವಿ ಮಾಡಿದರು..





ಈ ವೇಳೆ ಮಾತಾಡಿದ ಪೋಷಕರು, ಈ ವರ್ಷದ ದಾಖಲಾತಿಗೆ 90 ದಿನಗಳ ಸಡಿಲಿಗೆ ಕೊಡಬೇಕು. ವಯಸ್ಸಿನ ಸಡಿಲಿಕೆ ಸಮಸ್ಯೆಯಿಂದ 2.30 ಲಕ್ಷ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತದೆ. ರಾಜ್ಯ ಶಿಕ್ಷಣ ನೀತಿ (SEP) ಪ್ರಕಾರ 90 ದಿನ ಸಡಿಲಿಕೆ ಕೊಡುವ ಅವಕಾಶ ಇದೆ. ಈ ವರ್ಷಕ್ಕೆ ಅನ್ವಯ ಆಗುವಂತೆ ಸಡಲಿಕೆ ಕೊಡಬೇಕು ಎಂದು ಕೋರಿದರು.






error: Content is protected !!
Scroll to Top