ನಾಳೆಯಿಂದ ದ್ವಿತೀಯ ಪಿಯುಸಿ ‘ಅಗ್ನಿಪರೀಕ್ಷೆ’: ನಕಲು ತಡೆಗೆ ಸಜ್ಜಾದ ಶಿಕ್ಷಣ ಇಲಾಖೆ



(ನ್ಯೂಸ್‌ ಕಡಬ) newskadaba.com,ಫೆ.27 : ರಾಜ್ಯದಲ್ಲಿ ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ಈ ವೇಳೆ ಯಾವುದೇ ರೀತಿಯ ಅಕ್ರಮ ನಡೆಯದಂತೆ ಪರೀಕ್ಷಾ ಮಂಡಳಿ ಹದ್ದಿನ ಕಣ್ಣಿಟ್ಟಿದೆ.
ಮಾ.೧೭ರವರೆಗೆ ಪರೀಕ್ಷೆ ನಡೆಯಲಿದ್ದು, ೭,೧೦,೩೬೩ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯಾದ್ಯಂತ ೧,೨೧೭ ಕೇಂದ್ರಗಳಲ್ಲಿ ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. ಹೀಗಾಗಿ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟೆಚ್ಚರ, ಸೋಶಿಯಲ್ ಮೀಡಿಯಾದ ಮೇಲೂ ಬೋರ್ಡ್ ಕಣ್ಣಿಟ್ಟಿದೆ.





ಜತೆಗೆ ಪೇಪರ್ ಸೋರಿಕೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದೆ. ಪ್ರಶ್ನೆಪತ್ರಿಕೆ ರವಾನೆಗೂ ಬಿಗಿ ಭದ್ರತೆ ವಹಿಸಲಾಗಿದೆ. ಪರೀಕ್ಷೆ ನಡೆಯೋ ದಿನದಿಂದ ಪರೀಕ್ಷಾ ಕೇಂದ್ರದ ಸುತ್ತ ೨೦೦ ಮೀಟರ್ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿ, ಸೈಬರ್ ಸೆಂಟರ್, ಕಂಪ್ಯೂಟರ್ ಶಾಪ್ ಬಂದ್ ಮಾಡಲು ಸೂಚಿಸಲಾಗಿದೆ.
ಹಿಂದಿನ ಪರೀಕ್ಷೆಗಳಲ್ಲಿ ಅಕ್ರಮದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಮೇಲೆ ಪೊಲೀಸ್ ಇಲಾಖೆಯಿಂದ ವಿಶೇಷ ನಿಗಾ. ಪರೀಕ್ಷೆ ನಡೆಯೋ ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ.






ಪ್ರಶ್ನೆಪತ್ರಿಕೆ ಖಜಾನೆಯಿಂದ ಕೇಂದ್ರಗಳಿಗೆ ಹೋಗುವಾಗ ಬಿಗಿ ಪೊಲೀಸ್ ಭದ್ರತೆ, ಪ್ರಶ್ನೆಪತ್ರಿಕೆ ರವಾನೆ ವಿಡಿಯೋ ಚಿತ್ರೀಕರಣದ ವ್ಯವಸ್ಥೆ ಮಾಡಲಾಗುತ್ತದೆ.ನಿಗದಿ ಮಾಡಿದ ಸಮಯಕ್ಕಿಂತ ಮೊದಲು ಪ್ರಶ್ನೆಪತ್ರಿಕೆ ಖಜಾನೆಯಿಂದ ಓಪನ್ ಮಾಡುವಂತೆ ಇಲ್ಲ. ಅಂತಹ ಘಟನೆ ನಡೆದರೆ ಜವಾಬ್ದಾರಿ ಕೊಟ್ಟಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಪ್ರಶ್ನೆಪತ್ರಿಕೆ ಜವಾಬ್ದಾರಿ ವಹಿಸಿರುವವರು ಅಕ್ರಮದಲ್ಲಿ ಶಾಮೀಲಾದರೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಅಧಿಕಾರಿಗಳಿಗೆ ಸಂಪೂರ್ಣ ಫೋನ್ ನಿಷೇಧ. ಪರೀಕ್ಷೆಗಳಿಗೆ ವಾಚ್ ಸೇರಿದಂತೆ ಉಪಕರಣಗಳನ್ನು ಕೇಂದ್ರ ನಿಷೇಧಿಸಲಾಗಿದೆ.
ಪ್ರತಿ ಪರೀಕ್ಷಾ ಕೇಂದ್ರಕ್ಕೆ ಪೊಲೀಸ್ ಭದ್ರತೆ, ಜಿಲ್ಲೆಗಳಲ್ಲಿ ಎಸ್ಪಿ, ಡಿಸಿಗಳ ನೇತೃತ್ವದಲ್ಲಿ ಭರವಸೆ. ಪ್ರತಿ ಕೇಂದ್ರದಲ್ಲಿ ಸಿಟ್ಟಿಂಗ್ ಸ್ಕ್ವಾಡ್, ಫ್ಲೈಯಿಂಗ್ ಸ್ಕ್ವಾಡ್ ನಿಯೋಜಿಸಲಾಗಿದೆ.

ಪರೀಕ್ಷಾ ವೇಳಾಪಟ್ಟಿ

ಫೆಬ್ರವರಿ ೨೮- ಕನ್ನಡ, ಅರೇಬಿಕ್ ; ಮಾರ್ಚ್ ೨- ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ; ಮಾರ್ಚ್ ೩- ಇಂಗ್ಲೀಷ್ ; ಮಾರ್ಚ್ ೪- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್; ಮಾರ್ಚ್ ೫- ಇತಿಹಾಸ ; ಮಾರ್ಚ್ ೬- ಭೌತಶಾಸ್ತ್ರ ; ಮಾರ್ಚ್ ೭- ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭ ಶಾಸ್ತ್ರ; ಮಾರ್ಚ್ ೯- ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ ; ಮಾರ್ಚ್ ೧೦- ಅರ್ಥಶಾಸ್ತ್ರ ; ಮಾರ್ಚ್ ೧೧- ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ ವಿಜ್ಞಾನ ; ಮಾರ್ಚ್ ೧೨- ಹಿಂದಿ ; ಮಾರ್ಚ್ ೧೩- ರಾಜ್ಯಶಾಸ್ತ್ರ; ಮಾರ್ಚ್ ೧೪- ಲೆಕ್ಕಶಾಸ್ತ್ರ, ಗಣಿತ ; ಮಾರ್ಚ್ ೧೬-ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ; ಮಾರ್ಚ್ ೧೭- ಹಿಂದುಸ್ತಾನಿ, ಸಂಗೀತ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ.

error: Content is protected !!
Scroll to Top