(ನ್ಯೂಸ್ ಕಡಬ) newskadaba.com, ಫೆ. 20: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 1 ರೂಪಾಯಿ ಹೆಚ್ಚುವರಿ ಪ್ರೋತ್ಸಾಹಧನ ನೀಡಲು ಒಕ್ಕೂಟ ನಿರ್ಧರಿಸಿದೆ.
ಹಳೆಯ ದರವು ಪ್ರತಿ ಲೀಟರ್ ಗುಣಮಟ್ಟದ ಹಾಲಿಗೆ 40.76 ರೂ. ನೀಡಲಾಗುತ್ತಿತ್ತು. ಆದರೆ ಇಂದಿನ ನಿರ್ಧಾರದ ನಂತರ ಇದು 41.76 ರೂ. ಗೆ ಏರಿಕೆಯಾಗಲಿದೆ.ಇದರಲ್ಲಿ ಒಕ್ಕೂಟವು ಮೊದಲೇ ನೀಡುತ್ತಿದ್ದ 1.50 ರೂ. ಪ್ರೋತ್ಸಾಹಧನವೂ ಒಳಗೊಂಡಿದೆ.
ಈ ಹೆಚ್ಚುವರಿ ಪ್ರೋತ್ಸಾಹಧನವು ಸೀಮಿತ ಅವಧಿಗೆ ಮಾತ್ರ ಅನ್ವಯವಾಗುತ್ತದೆ: ಫೆಬ್ರವರಿ 21, 2026 ರಿಂದ, ಮೇ 31, 2026 ರವರೆಗೆ ಮಾತ್ರ.








