ಬೆಳ್ತಂಗಡಿ: ಆಟದ ವೇಳೆ ‘ಚೆಂಡು’ ಎಂದು ಸ್ಫೋಟಕ ಎಸೆದ ಬಾಲಕ ಭಾರಿ ಅನಾಹುತದಿಂದ ಕೂದಲೆಳೆ ಅಂತರದಲ್ಲಿ ಪಾರು!



(ನ್ಯೂಸ್ಕಡಬ) newskadaba.com,  ಫೆ.20  ಆಟವಾಡುತ್ತಿದ್ದ ವೇಳೆ ಅಪರಿಚಿತ ವಸ್ತುವೊಂದು ಸ್ಫೋಟಗೊಂಡು ಬಾಲಕನೊಬ್ಬ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಬಂದಾರು ಗ್ರಾಮದಲ್ಲಿ ಸಂಭವಿಸಿದೆ.ಗಾಯಗೊಂಡ ಬಾಲಕನ  ಪಯಸ್ಸು 11 ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.





​ ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಅವರಿಗೆ ಚೆಂಡಿನ ಆಕಾರದ ಒಂದು ವಸ್ತು ಸಿಕ್ಕಿದೆ. ಆ ವಸ್ತು ಸ್ಫೋಟಕವೆಂದು ತಿಳಿಯದ ಮಕ್ಕಳು ಅದನ್ನು ಕ್ರಿಕೆಟ್ ಆಡಲು ಬಳಸಿದ್ದಾರೆ.ಒಬ್ಬ ಬಾಲಕ ಬೌಲಿಂಗ್ ಮಾಡಿದಾಗ, ಮತ್ತೊಬ್ಬ ಬಾಲಕ ಬ್ಯಾಟ್‌ನಿಂದ ಆ ವಸ್ತುವನ್ನು ಹೊಡೆದಿದ್ದಾನೆ. ತಕ್ಷಣವೇ ಆ ವಸ್ತು ಭಾರಿ ಶಬ್ದದೊಂದಿಗೆ ಸ್ಫೋಟಗೊಂಡಿದೆ.






​ ಕಾಡು ಪ್ರಾಣಿಗಳನ್ನು (ಹಂದಿ ಇತ್ಯಾದಿ) ಬೇಟೆಯಾಡಲು ಕಿಡಿಗೇಡಿಗಳು ಇಟ್ಟಿದ್ದ ನಾಡ ಸ್ಫೋಟಕ ಇದಾಗಿದೆ ಎಂದು ಶಂಕಿಸಲಾಗಿದೆ. ಕಾಡಿನ ಅಂಚಿನಲ್ಲಿ ಎಸೆದಿದ್ದ ಅಥವಾ ಇಟ್ಟಿದ್ದ ಈ ಸ್ಫೋಟಕವನ್ನು ನಾಯಿಗಳು ಕಚ್ಚಿಕೊಂಡು ಬಂದು ಮನೆಯ ಅಂಗಳಕ್ಕೆ ಹಾಕಿರಬಹುದು ಎಂದು ಅಂದಾಜಿಸಲಾಗಿದೆ.

error: Content is protected !!
Scroll to Top