(ನ್ಯೂಸ್ ಕಡಬ) newskadaba.com ಫೆ.19 : ಕಳೆದ ಮೂರ್ನಾಲ್ಕು ದಿನದಿಂದ ಸತತವಾಗಿ ಇಳಿದಿದ್ದ ಚಿನ್ನದ ಬೆಲೆಯಲ್ಲಿ ಇಂದು ದಿಢೀರನೆ 2290 ರೂಪಾಯಿ ಹೆಚ್ಚಳ ಆಗಿದೆ. ಬೆಳ್ಳಿ ಬೆಲೆಯಲ್ಲಿಯೂ ಭರ್ಜರಿ 15 ಸಾವಿರ ರೂ ಹೆಚ್ಚಳ ಆಗಿದೆ.
ಚಿನ್ನದ ಇಂದಿನ ದರ
ಫೆಬ್ರವರಿ 19 2026, ಗುರುವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯ 1 ಗ್ರಾಂ ನಲ್ಲಿ 229 ರೂಪಾಯಿ ಹೆಚ್ಚಳ ಆಗಿದೆ. 10 ಗ್ರಾಂ ನಲ್ಲಿ 2290 ರೂ ಏರಿಕೆ ಕಂಡಿದೆ. ಇದರಿಂದಾಗಿ ಮತ್ತೆ 24 ಕ್ಯಾರೆಟ್ನ 1 ಗ್ರಾಂ ಬೆಲೆ 15,649 ರೂ ದಾಖಲಾಗಿದೆ. 10 ಗ್ರಾಂ ಬೆಲೆ 1,56,490 ರೂಪಾಯಿ ಆಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ 1 ಗ್ರಾಂ ಬೆಲೆ 210 ರೂ ಏರಿಕೆ ಆಗಿ 14,345 ರೂ ಆಗಿದ್ದು 10 ಗ್ರಾಂ ಬೆಲೆ 1,43,450 ರೂಪಾಯಿಗೆ ಏರಿದೆ








