(ನ್ಯೂಸ್ ಕಡಬ) newskadaba.com ಫೆ.19: ಕಾರ್ಟೂನ್ ಪಾತ್ರಗಳು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟ, ಅದರಲ್ಲೂ ಸ್ಕೂಬಿ ಡೂ, ಶಾಗ್ಗಿ, ವೆಲ್ಮಾ, ಫ್ರೆಡ್ ಮತ್ತು ಡ್ಯಾಫ್ನೆ ಪಾತ್ರಗಳು ಜನಪ್ರಿಯತೆಯ ಶಿಖರದಲ್ಲಿವೆ. ಆದರೆ ಈ ಪಾತ್ರಧಾರಿಗಳ ವೇಷ ಧರಿಸಿ ಕಳ್ಳರು ಮೊಬೈಲ್ ಕಳ್ಳತನ ನಡೆಸುತ್ತಿದ್ದ ಘಟನೆ ತೀವ್ರ ಆತಂಕ ಮೂಡಿಸಿದೆ.
ಅಂಡರ್ ಕವರ್ ಪೊಲೀಸರ ತಂಡ ಈ ಕಳ್ಳರ ಮೇಲೆ ನಿಗಾ ಇರಿಸಿಕೊಂಡಿದ್ದು, ಸದ್ಯಕ್ಕೆ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷರನ್ನು ಬಂಧಿಸಲಾಗಿದೆ. ಬಂಧಿತರ ಒಬ್ಬೊಬ್ಬರ ಬಳಿ ಕನಿಷ್ಠ 8 ಮೊಬೈಲ್ ಫೋನ್ಗಳು ಪತ್ತೆಯಾಗಿವೆ. ಪೊಲೀಸರು ಕಳ್ಳತನದಲ್ಲಿ ಪಡೆದ ಸಾಧನಗಳನ್ನು ನಿಜವಾದ ಮಾಲೀಕರಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ಯಾಂಗ್ಗಳು ವಿಶೇಷ ಹಬ್ಬಗಳ ಸಮಯದಲ್ಲಿ ಹೆಚ್ಚಿದ ಜನಸಂದಣಿಯನ್ನು ಗಮನಿಸಿ ದರೋಡೆ ನಡೆಸುತ್ತಿದ್ದಿದ್ದು, ಈ ಸಂಬಂಧವಾಗಿ ಹಲವು ಬಾರಿ ಪೊಲೀಸರು ವಿಶೇಷ ವೇಷಧಾರಣೆಯಲ್ಲಿ ಕಳ್ಳರನ್ನು ಹಿಡಿದಿದ್ದಾರೆ. ಕಳೆದ ವರ್ಷ ಮಾರ್ಚ್ನಲ್ಲಿ, ಪವರ್ ರೇಂಜರ್ ವೇಷ ಧರಿಸಿದ ಪೊಲೀಸರು ಸಾವೊ ಪಾಲೊದ ಇಬಿರಾಪುಯೆರಾ ಪಾರ್ಕ್ ಬಳಿ ಕಳ್ಳನನ್ನು ಬಂಧಿಸಿದ್ದರು.








