ಸುಳ್ಯದಲ್ಲಿ ಎಸ್.ಅಂಗಾರ 20 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ​► ವಾಡ್ಯಪ್ಪ ಗೌಡ ಎರ್ಮಾಯಿಲ್

(ನ್ಯೂಸ್ ಕಡಬ) newskadaba.com ಕಡಬ, ಮೇ.10. ಬಿಜೆಪಿಯ ಭದ್ರಕೋಟೆಯಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಶಾಸಕ ಎಸ್.ಅಂಗಾರ ಅವರು 20 ಸಾವಿರ ಮತಗಳ ಅಂತರದಿಂದ ಜಯ ಸಾಸಲಿದ್ದಾರೆ ಎಂದು ಬಿಜೆಪಿ ಕಡಬ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅವರು ಗುರುವಾರ ಕಡಬದ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕಡಬ ಮಹಾಶಕ್ತಿಕೇಂದ್ರದ ವ್ಯಾಪ್ತಿಯಲ್ಲಿ ಸಂಘಟಿತ ರೀತಿಯಲ್ಲಿ ವ್ಯವಸ್ಥಿತ ಪ್ರಚಾರ ಕಾರ್ಯ ನಡೆದಿದ್ದು, ಈ ಬಾರಿ ಈ ಹಿಂದಿಗಿಂತ ಬಿಜೆಪಿಗೆ 2 ಸಾವಿರ ಮತಗಳ ಲೀಡ್ ಬರಲಿದೆ. ಜಿಲ್ಲೆಯ ಅಭಿವದ್ಧಿಯನ್ನು ತುಲನೆ ಮಾಡಿದಾಗ ಹೆಚ್ಚಿನ ಅಭಿವದ್ಧಿ  ಸುಳ್ಯ ಕ್ಷೇತ್ರದಲ್ಲಿ ಆಗಿದೆ. ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಸ್ತೆ ಅಭಿವೃದ್ಧಿ, ಕಡಬ ಸಮುದಾಯ ಆಸ್ಪತ್ರೆಯ ಕಟ್ಟಡ ನಿರ್ಮಾಣ, ಕಡಬ-ಪಂಜ ರಸ್ತೆಯ ಅಭಿವೃದ್ಧಿ, ಕಡಬದ ಹೊಸಮಠ ಸೇತುವೆ, ಬಿಳಿನೆಲೆ ಸೇತುವೆ, ಶಾಂತಿಮೊಗರು ಸೇತುವೆ ಸೇರಿದಂತೆ  ಕಡಬ ಭಾಗದಲ್ಲಿ ರಸ್ತೆ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಶಾಸಕರು ಕಾರ್ಯನಿರ್ವಹಿಸಿದ್ದಾರೆ. ಕಡಬವನ್ನು ಪ್ರಥಮವಾಗಿ ತಾಲೂಕಾಗಿ ಘೋಷಿಸಿದ್ದು ರಾಜ್ಯದಲ್ಲಿ  ಈ ಹಿಂದೆ ಅಕಾರದಲ್ಲಿದ್ದ ಬಿಜೆಪಿ ಸರಕಾರದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು. ಆದರೆ ಕಾಂಗ್ರೆಸ್ ಸರಕಾರ ಒಮ್ಮೆ ಘೋಷಣೆಯಾದ ತಾಲೂಕನ್ನು ಮತ್ತೆ ಘೋಷಣೆ ಮಾಡಿ ರಾಜಕೀಯ ಲಾಭ ಪಡೆಯುವ ಪ್ರಯತ್ನ ನಡೆಸಿರುವುದು ಕ್ಷೇತ್ರದ ಪ್ರಜ್ಞಾವಂತ ಮತದಾರರಿಗೆ ತಿಳಿಯದ ವಿಚಾರವೇನಲ್ಲ. ಸತತ 5 ಬಾರಿ ಗೆಲುವು ಸಾಸಿ ಕ್ಷೇತ್ರದ ಜನರ ಒಲವನ್ನು ಗಳಿಸಿರುವ ಶಾಸಕ ಅಂಗಾರ ಅವರ ಜನಪ್ರಿಯತೆಯನ್ನು ಕಂಡು ಹತಾಶೆಗೊಂಡಿರುವ ಕಾಂಗ್ರೆಸಿಗರು ಶಾಸಕರು ಮಾಡಿಸಿದ  ಅಭಿವೃದ್ಧಿ ಕಾರ್ಯಗಳನ್ನು ನಾವು ಮಾಡಿದ್ದು ಎಂದು ಪತ್ರಿಕೆಗಳಲ್ಲಿ ಪ್ರಕಟನೆ ಕೊಡುವ ಮೂಲಕ ಮತದಾರರ ಹಾದಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಆದರೆ ಸುಳ್ಯ ಕ್ಷೇತ್ರದ ಮತದಾರರು ಪ್ರಜ್ಞಾವಂತರಾಗಿದ್ದು, ಈ ಬಾರಿ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿಯು ಭರ್ಜರಿ ಗೆಲುವು ಸಾಧಿಸಲಿದೆ ಎಂದು ವಾಡ್ಯಪ್ಪ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

Also Read  ಮುಳುಗಡೆಯ ಭೀತಿಯಲ್ಲಿ ಹೊಸ್ಮಠ ಹೊಸ ಸೇತುವೆ ➤ ನೂತನ ಸೇತುವೆಗೆ ಹೊಡೆಯುತ್ತಿರುವ ನೆರೆ ನೀರು ➤ ಸ್ಥಳಕ್ಕೆ ಜಮಾಯಿಸುತ್ತಿರುವ ಸಾರ್ವಜನಿಕರು

ಪತ್ರಿಕಾಗೋಷ್ಠಿಯಲ್ಲಿ ಕಡಬ ಬಿಜೆಪಿ ಮಹಾ ಶಕ್ತಿ ಕೇಂದ್ರದ ಪ್ರಮುಖ್ ಎ.ಬಿ.ಮನೋಹರ ರೈ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎನ್.ಕೆ., ಮಾಜಿ ಅಧ್ಯಕ್ಷ ಸತೀಶ್ ನಾಯಕ್, ಎಪಿಎಂಸಿ ಸದಸ್ಯೆ ಪುಲಸ್ತ್ಯಾ ರೈ, ಪ್ರಮುಖರಾದ ಮೋನಪ್ಪ ಗೌಡ ನಾಡೋಳಿ, ಅಶೋಕ್ ಕುಮಾರ್ ಪಿ., ಫಯಾಝ್ ಕೆನರಾ, ಸುರೇಶ್ ದೇಂತಾರು, ಹರೀಶ್ ಕೋಡಂದೂರು, ಲಕ್ಷ್ಮಣ ಆಚಾರ್ಯ ಕೊಂಬಾರು ಉಪಸ್ಥಿತರಿದ್ದರು.

Also Read  ಸಂಪೂರ್ಣ ಹದಗೆಟ್ಟ ರಾ.ಹೆ. 75 ► ಶೀಘ್ರ ಸರಿಪಡಿಸುವಂತೆ ಸಾರ್ವಜನಿಕ ಹಿತಾಸಕ್ತಿ ವೇದಿಕೆಯಿಂದ ಸಂಸದರಿಗೆ ಮನವಿ

error: Content is protected !!
Scroll to Top