ತಮಿಳು ಕಾರ್ಮಿಕರ ಬೆಂಬಲ ಬಿಜೆಪಿಗೆ ​► ತಮಿಳು ಬಿಜೆಪಿ ಮುಖಂಡ ತಿರುಪತಿ

(ನ್ಯೂಸ್ ಕಡಬ) newskadaba.com ಕಡಬ, ಮೇ.10. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿರುವ ತಮಿಳು ಕಾರ್ಮಿಕರು ಬಿಜೆಪಿಗೆ ಮತ ನೀಡಿ ಸುಳ್ಯ ಕ್ಷೇತ್ರದ ಅಭ್ಯರ್ಥಿ ಎಸ್.ಅಂಗಾರರವರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಲಿದ್ದಾರೆ ಎಂದು ಸುಳ್ಯ ಬಿಜೆಪಿ ತಮಿಳು ಘಟಕದ ಕಡಬ ವಲಯದ ಅಧ್ಯಕ್ಷ ತಿರುಪತಿ ಎನ್.ಕೂಪ್ ಹೇಳಿದರು.

ಅವರು ಬುಧವಾರ ಕಡಬ ಬಿಜೆಪಿ ಚುನಾವಣಾ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೇಸ್ ತಮಿಳು ಕಾರ್ಮಿಕರಿಗೆ ಸದಾ ಸುಳ್ಳು ಭರವಸೆಗಳನ್ನು ನೀಡುತ್ತಾ ವಂಚಿಸುತ್ತಾ ಬರುತ್ತಿದೆ, ಈ ಬಾರಿ ಕಾಂಗ್ರೇಸ್ ಆಟ ನಡೆಯುವುದಿಲ್ಲ, ಈ ಬಾರೀ ಬಿಜೆಪಿಗೆ ಎಲ್ಲಾ ಕಾಮರ್ಿಕರು ಮತ ಹಾಕಿ ಕಾಂಗ್ರೇಸ್ಗೆ ಪಾಠ ಕಲಿಸಲಿದ್ದಾರೆ ಎಂದರು. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕನಿಷ್ಟ ವೇತನ ಸಿಗುವ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್ ನೀಡಬೇಕೆನ್ನುವ ನೀತಿ ಜಾರಿಗೆ ತಂದ ಬಳಿಕ ಬಹುತೇಕ ತಮಿಳು ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್ ದೊರೆತಿದೆ, ಮೋದಿಯವರ ಸರಕಾರ ಬಂದ ಬಳಿಕ ಕಾರ್ಮಿಕರಿಗೆ ಸಿಗುತಿದ್ದ ಬೋನಸ್ ಎಂಟು ಸಾವಿರದಿಂದ 16 ಸಾವಿರಕ್ಕೆ ಏರಿದೆ, ತಮಿಳರಿಗೆ ಜಾತಿ ಸರ್ಟಿಫಿಕೇಟ್ ನೀಡಿದ್ದು ತಾವೆಂದು ಕಾಂಗ್ರೇಸ್ ಹೇಳಿಕೊಳ್ಳುತ್ತಿದೆ, ಆದರೆ ಹಿಂದೆ ನಮಗೆ ಜಾತಿ ಸಟರ್ಿಫಿಕೇಟ್ ಸಿಗುತ್ತಿತ್ತು, ಅದನ್ನು ನಿಲ್ಲಿಸಿದ್ದೇ ಈ ಕಾಂಗ್ರೇಸ್ ಸರಕಾರ, ರಾಜ್ಯದಲ್ಲಿ ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾಗ ತಮಿಳರಿಗೆ ಜಾತಿ ಪ್ರಮಾಣ ಪತ್ರ ನೀಡಲು ಹೈಪವರ್ ಕಮಿಷನ್ ಮಾಡಿ ಜಾತಿ ಪ್ರಮಾಣಕ್ಕೆ ಆದೇಶ ನೀಡಿದ್ದರು. ಅದನ್ನೇ ಕಾಂಗ್ರೇಸ್ ಸರಕಾರ ಮುಂದುವರಿಸಿದೆ, ರಾಜ್ಯದಲ್ಲಿ 45 ವರ್ಷ ಅಧಿಕಾರ ನಡೆಸಿರುವ ಕಾಂಗ್ರೇಸ್ ಗೆ ನಮಗೆ ಜಾತಿ ಪ್ರಮಾಣ ಪತ್ರ ನೀಡಲು ಸಾಧ್ಯವಾಗಿಲ್ಲ, ಡಿ.ವಿ ಮಾಡಿರುವ ಕೆಲಸವನ್ನು ನಾವು ಮಾಡಿದೆಂದು ಈಗ ಹೇಳಿಕೊಳ್ಳುತ್ತಿದ್ದಾರೆ, ಕಳೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೇಸ್ನವರು ತಮಿಳು ಕಾರ್ಮಿಕರ ಮೂರನೇ  ತಲೆ ಮಾರಿಗೆ ಕೆಲಸ ಕೊಡಿಸುವ ಭರವಸೆ ನೀಡಿ ಈಡೇರಿಸಿಲ್ಲ. ಈಗ ಮತ್ತೆ ಅದೇ ರಾಗ ಎಳೆಯುತ್ತಿದ್ದಾರೆ ಎಂದರು.

ನಮ್ಮಲ್ಲಿ ಒಪ್ಪಂದದ ಆಧಾರದಲ್ಲಿ ಸುಳ್ಯ ಕ್ಷೇತ್ರ 16 ಕಾರ್ಮಿಕರು ಕೆಲಸ ಕಳೆದುಕೊಂಡಾಗ ಕೆಲಸ ಕೊಡಿಸು ಭರವಸೆ ನೀಡಿದ ಸಚಿವ ರಮಾನಾಥ ರೈ ಅವರು ಈವರೆಗೆ ಕೆಲಸ ಕೊಡಿಸಿಲ್ಲ, 16 ತಿಂಗಳು ಕಾರ್ಮಿಕರು ಸಚಿವರ ಬಾಗಿಲಿಗೆ ಅಲೆದಾಡಿದ್ದೇ ಬಂತು, ಕಾಮಿಕರು ಇರುವ ವಸತಿಗಳನ್ನು ಅವರ ಹೆಸರಿಗೆ ಮಾಡಿಕೊಡುವುದಾಗಿ ಹೇಳಿ ಮೊಸ ಮಾಡಲಾಗಿದೆ, ಇಂತಹ ಸುಳ್ಳುಗಾರರನ್ನು ತಮಿಳರು ನಂಬುವ ಸ್ಥಿತಿಯಲ್ಲಿಲ್ಲ, ಸುಳ್ಯ ಶಾಸಕ ಅಂಗಾರ ನಮ್ಮ ತಮಿಳು ಕಾಲೋನಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಾರೆ, ಕಾರ್ಮಿಕರಿಗೆ ಜಾತಿ ಪ್ರಮಾಣಪತ್ರ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ, ತಮಿಳು ಕಾರ್ಮಿಕರ ಆರಾಧನಾ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ ಈ ಎಲ್ಲಾ ಕಾರಣಕ್ಕಾಗಿ ಸುಳ್ಯ ಕ್ಷೇತ್ರದಲ್ಲಿ ಅಂಗಾರರನ್ನು ಗೆಲ್ಲಿಸುತ್ತೇವೆ ಎಂದು ತಿರುಪತಿ ಹೇಳಿದರು.

Also Read  ಪುತ್ತೂರು: ಮರದ ಕೊಂಬೆ ಬಿದ್ದು ವ್ಯಕ್ತಿ ಮೃತ್ಯು

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಮಿಳು ಘಟಕದ ಪ್ರಮುಖರಾದ ಶಿವ ಮಂಡೇಕರ, ರಾಜರತ್ನ, ಗಣೇಶ್ ನೆಲ್ಲಿಕಟ್ಟೆ, ಸುರೇಶ್ ಬಾಬು, ಕುಮಾರವೇಲು, ಮುನಿರತ್ನ ಕಲ್ಲಾಜೆ, ಪುಣ್ಯ ಮೂರ್ತಿ, ಪ್ರಶಾಂತ್, ರವಿಕುಮಾರ್, ರಾಜರತ್ನಂ, ಸುಬ್ರಹ್ಮಣ್ಯ ಬೆತ್ತೋಡಿ, ಭಾಗ್ಯನಾಥ್ ಕೊಂಬಾರು ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top