(ನ್ಯೂಸ್ ಕಡಬ) newskadaba.com, ಫೆ.14 ಸುಳ್ಯ :ಬೆಳ್ಳಾರೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ಟ್ಯಾಂಕಿ ಸ್ಪೋಟಗೊಂಡಿದೆ. ತಾಂತ್ರಿಕ ಅಡಚಣೆಗಳಿಂದ ಘಟಕದ ಅನಿಲಸಂಪರ್ಕದ ಸಿಲಿಂಡರ್ ಸ್ಪೋಟ ಸಂಭವಿಸಿದ್ದು ಇಲ್ಲಿ ಗಾಜುಗಳು ಪುಡಿ ಪುಡಿಯಾಗಿದೆ.
ಹಲವು ವರುಷಗಳಿಂದ ಕಾರ್ಯ ನಿರ್ವಹಿಸುತ್ತಾ ಇದ್ದ ಈ ಟ್ಯಾಂಕಿ ಸ್ಪೋಟದ ಬಗ್ಗೆ ಸುಳ್ಯ ತಾಲೂಕು ಪಂಚಾಯಿತಿ ಇಒ ರವರು ಸೂಕ್ತ ತನಿಖೆ ಕೈಗೊಳ್ಳಬೇಕೆಂದು ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾ.ಪಂ ಉಪಾಧ್ಯಕ್ಷೆ ವೀಣಾ ಮೂಡಾಯಿತೋಟ, ಸದಸ್ಯರಾದ ಅನಿಲ್ ರೈ ಚಾವಡಿಬಾಗಿಲು, ಮಣಿಕಂಠ ಕಲ್ಲೋಣಿ, ಸಾರ್ವಜನಿಕರು ಉಪಸ್ಥಿತರಿದ್ದು ವೀಕ್ಷಿಸಿದರು.








