(ನ್ಯೂಸ್ ಕಡಬ) newskadaba.com, ಫೆ.14: ಅಬುಧಾಬಿಯಲ್ಲಿ ನಡೆದ ಅಂತರರಾಷ್ಟ್ರೀಯ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ವಿಟ್ಲದ ಶ್ರೀಲಕ್ಷ್ಮಿ ಅವರು ಮಾಡಿರುವ ಅದ್ಭುತ ಸಾಧನೆ…ಇಂಟರ್ನ್ಯಾಷನಲ್ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾದ ಅಂತರರಾಷ್ಟ್ರೀಯ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಶ್ರೀಲಕ್ಷ್ಮಿ ಅವರು ಈ ಕೂಟದಲ್ಲಿ ಒಟ್ಟು ನಾಲ್ಕು ಪದಕಗಳನ್ನು ಗೆದ್ದಿದ್ದಾರೆ.
: 200 ಮೀಟರ್ ಬಟರ್‌ಫ್ಲೈ ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.200 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಮತ್ತು 100 ಮೀಟರ್ ಬಟರ್‌ಫ್ಲೈ ವಿಭಾಗಗಳಲ್ಲಿ ಎರಡು ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ.ಹಾಗೂ 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕೋಟಿಕೆರೆ ಮೂಲದ ಗೋಪಾಲ ಸಪಲ್ಯ ಮತ್ತು ಲೀಲಾವತಿ ದಂಪತಿಯ ಕಿರಿಯ ಪುತ್ರಿ. ಈಜನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿರುವ ಶ್ರೀಲಕ್ಷ್ಮಿ ಅವರು, ಅತ್ಯುತ್ತಮ ಈಜು ತರಬೇತುಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ.ಶ್ರೀಲಕ್ಷ್ಮಿ ಅವರ ಈ ಶ್ಲಾಘನೀಯ ಸಾಧನೆಯು ಅವರ ಜನ್ಮಸ್ಥಳವಾದ ವಿಟ್ಲಕ್ಕೆ ಮತ್ತು ಭಾರತಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಗೌರವವನ್ನು ತಂದುಕೊಟ್ಟಿದೆ.








