(ನ್ಯೂಸ್ ಕಡಬ) newskadaba.com, ಫೆ.12 ಕೇಂದ್ರ ಸರ್ಕಾರವು 1961ರ ಹಳೆಯ ಆದಾಯ ತೆರಿಗೆ ಕಾಯ್ದೆಯನ್ನು ಸಂಪೂರ್ಣವಾಗಿ ಪರಿಷ್ಕರಿಸುತ್ತಿದ್ದು, 2026ರ ಏಪ್ರಿಲ್ ನಿಂದ ಹೊಸ ಕಾಯ್ದೆ ಜಾರಿಗೆ ಬರುವ ಸಾಧ್ಯತೆಯಿದೆ.
ಇನ್ನು ಮುಂದೆ ಪ್ಯಾನ್ ಕಾರ್ಡ್ ಕೇವಲ ತೆರಿಗೆ ಉದ್ದೇಶಕ್ಕೆ ಸೀಮಿತವಾಗದೆ, ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ವ್ಯವಹಾರ ನಡೆಸಲು ‘ಏಕೈಕ ವ್ಯಾಪಾರ ಗುರುತಿನ ಚೀಟಿ’ ಆಗಿ ಬಳಕೆಯಾಗಲಿದೆ.ಸಾಮಾನ್ಯ ಜನರಿಗೂ ಅರ್ಥವಾಗುವಂತೆ ತೆರಿಗೆ ನಿಯಮಗಳನ್ನು ಸರಳಗೊಳಿಸುವುದು ಮತ್ತು ಟ್ಯಾಕ್ಸ್ ಸಲ್ಲಿಕೆಯನ್ನು ಸುಲಭಗೊಳಿಸುವುದು ಇದರ ಮುಖ್ಯ ಉದ್ದೇಶ.ಹೊಸ ತಂತ್ರಜ್ಞಾನದ ಅಳವಡಿಕೆಯಿಂದ ತೆರಿಗೆ ನೋಟಿಸ್ಗಳ ಗೊಂದಲ ಕಡಿಮೆಯಾಗಲಿದೆ ಮತ್ತು ರಿಫಂಡ್ ಹಣ ನೇರವಾಗಿ, ವೇಗವಾಗಿ ಬ್ಯಾಂಕ್ ಖಾತೆಗೆ ಬರಲಿದೆ.
“ನಿಮ್ಮ ಪ್ಯಾನ್ ಕಾರ್ಡ್ ಇನ್ನೂ ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಆಗಿಲ್ಲದಿದ್ದರೆ ಈ ಕೂಡಲೇ ಮಾಡಿಸಿಕೊಳ್ಳಿ. 2026ರ ಹೊಸ ಕಾಯ್ದೆ ಜಾರಿಯಾಗುವ ಮೊದಲೇ ನಿಮ್ಮ ಹಣಕಾಸಿನ ದಾಖಲೆಗಳನ್ನು ಅಪ್ಡೇಟ್ ಮಾಡಿಕೊಳ್ಳುವುದು ಉತ್ತಮ……








