ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ ಚಿನ್ನದ ಬೆಲೆಯಲ್ಲಿ ಇಳಿಕೆ



(ನ್ಯೂಸ್ಕಡಬ) newskadaba.com,  ಫೆ.12 ಬೆಂಗಳೂರು: ಚಿನ್ನದ ದರದಲ್ಲಿ ಸ್ವಲ್ಪ ಮಟ್ಟಿನ ಇಳಿಕೆಯಾಗಿದ್ದರೂ ಭಾರೀ ಇಳಿಕೆಯಾಗಿಲ್ಲ. ಚಿನ್ನದ ಬೆಲೆ 1.58 ಲಕ್ಷದ ಆಸುಪಾಸಲ್ಲಿದ್ದರೆ, ಬೆಳ್ಳಿಯು 3 ಲಕ್ಷ ರೂ ಬೆಲೆಯ ಸಮೀಪದಲ್ಲಿದೆ.
ಚಿನ್ನದ ಇಂದಿನ ದರ





ಫೆಬ್ರವರಿ 12 2026, ಗುರುವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. 24 ಕ್ಯಾರೆಟ್‌ನ 1 ಗ್ರಾಂ ಬೆಲೆ 120 ರೂ ಇಳಿಕೆಯಾಗಿ, 15,840 ರೂ ದಾಖಲಾಗಿದೆ. 10 ಗ್ರಾಂ ಬೆಲೆಯಲ್ಲಿ 1200 ರೂ ಇಳಿಕೆ ಆಗಿದ್ದು, 10 ಗ್ರಾಂ ಬೆಲೆ 1,58,400 ರೂಪಾಯಿ ಆಗಿದೆ.






22 ಕ್ಯಾರೆಟ್ ಚಿನ್ನದ ಬೆಲೆ

22 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 110 ರೂ ಕಡಿತವಾಗಿ 14,520 ರೂ ದಾಖಲಾಗಿದೆ. 10 ಗ್ರಾಂನಲ್ಲಿ 1010 ರೂ ಇಳಿದಿದ್ದು, 1,45,200 ರೂಪಾಯಿಗೆ ಇಳಿಕೆಯಾಗಿದೆ.

ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 15840 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,58,400 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ.

ಬೆಳ್ಳಿ ಬೆಲೆಯಲ್ಲಿ ಏರಿಕೆ

ಬೆಳ್ಳಿ ಬೆಲೆಯಲ್ಲಿ ಇಂದು ಗ್ರಾಂ ನಲ್ಲಿ 5 ರೂ ಹೆಚ್ಚಿಗೆಯಾಗಿದ್ದು , ಕೆಜಿಗೆ 5 ಸಾವಿರ ಏರಿಕೆ ಆಗಿದೆ. ಕೆಜಿಗೆ 2,95,000 ರೂಪಾಯಿ ಇದೆ,.

error: Content is protected !!
Scroll to Top