ಕಾಸರಗೋಡು : ಕಾರು-ಸ್ಕೂಟರ್ ಅಪಘಾತ – ಸವಾರ ಮೃತ್ಯು



(ನ್ಯೂಸ್‌ ಕಡಬ) newskadaba.com,  ಫೆ.09 ಕಾಸರಗೋಡು: ರಾಷ್ಟೀಯ ಹೆದ್ದಾರಿಯ ಆರಿಕ್ಕಾಡಿಯಲ್ಲಿ ರವಿವಾರ ರಾತ್ರಿ ನಡೆದ ಕಾರು ಮತ್ತು ಸ್ಕೂಟರ್ ನಡುವಿನ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ನಡೆದಿದೆ..





ಮೂಲತಃ ಪಚ್ಚಂಬಳ ನಿವಾಸಿ , ಪ್ರಸ್ತುತ ಕನ್ಯಾನದಲ್ಲಿ ವಾಸವಾಗಿರುವ ಅಬ್ದುಲ್ ಮುನೀರ್ (38) ಮೃತಪಟ್ಟವರು. ಇವರು ಉಪ್ಪಳದಲ್ಲಿ ಹೊಟೇಲ್ ಕಾರ್ಮಿಕನಾಗಿದ್ದರು.






ಗಂಭೀರ ಗಾಯಗೊಂಡಿದ್ದ ಸವಾರನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹ ವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆ ಶವಾಗಾರ ದಲ್ಲಿರಿಸಲಾಗಿದೆ.

error: Content is protected !!
Scroll to Top