ಇಂದಿನ ರಾಜ್ಯದ ಹವಾಮಾನ ವರದಿ



(ನ್ಯೂಸ್ಕಡಬ) newskadaba.com, ಫೆ.07:ರ್ನಾಟಕದ ವಿವಿಧ ಭಾಗದಲ್ಲಿ ಚಳಿಯ ವಾತಾವರಣ ಮುಂದುವರಿದಿದೆ. ಇನ್ನು ಮುಂದಿನ 5 ದಿನಗಳ ವರೆಗೆ ಹವಾಮಾನದಲ್ಲಿ ದೊಡ್ಡ ವ್ಯತ್ಯಾಸವಿಲ್ಲ. ಆದರೆ ಗರಿಷ್ಠ ತಾಪಮಾನದಲ್ಲಿ ಹೆಚ್ಚಳವಾಗುತ್ತಿದ್ದು, ಕರ್ನಾಟಕದ ವಿವಿಧ ಭಾಗಗಳಲ್ಲಿ ಮಧ್ಯಾಹ್ನದ ವೇಳೆ ಬಿಸಿಲು ಹೆಚ್ಚಾಗಲಿದೆ.





ಉಳಿದಂತೆ ಕರ್ನಾಟಕದಾದ್ಯಂತ ಬಹುತೇಕ ಒಣಹವೆ ಮುಂದುವರಿದಿದೆ. ಮುಂಜಾನೆ ಹಾಗೂ ಸಂಜೆಯ ವೇಳೆ ಮಾತ್ರ ಚಳಿ ಇರಲಿದ್ದು, ಮಧ್ಯಾಹ್ನದ ಬಿಸಿಲು ನೆತ್ತಿಸುಡಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ..






ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಾರವಾರದಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

error: Content is protected !!
Scroll to Top