(ನ್ಯೂಸ್ ಕಡಬ) newskadaba.com,ಫೆ.03 ಬೆಂಗಳೂರು: ಚಿನ್ನದ ಬೆಲೆಯ ಸತತ ಕುಸಿತ ಮುಂದುವರಿಯುತ್ತಿದೆ. ನಿನ್ನೆ ಸೋಮವಾರ ಸುಮಾರು 700-800 ರೂಗಳಷ್ಟು ಇಳಿದಿದ್ದ ಚಿನ್ನದ ಬೆಲೆ ಇವತ್ತು ಮಂಗಳವಾರ 100-150 ರೂ ಕಡಿಮೆಗೊಂಡಿದೆ. ಅಪರಂಜಿ ಚಿನ್ನದ ಬೆಲೆ 15,175-15,200 ರೂ ಶ್ರೇಣಿಯಲ್ಲಿದೆ. ಆಭರಣ ಚಿನ್ನದ ಬೆಲೆ 13,900 ರೂನಿಂದ 13,925 ರೂ ಶ್ರೇಣಿಯಲ್ಲಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಇದರ ಬೆಲೆ ಸಖತ್ ಕುಸಿತವಾಗಿದೆ. ಬೆಳ್ಳಿ ಬೆಲೆಯ ಭರ್ಜರಿ ಕುಸಿತವೂ ಮುಂದುವರಿದಿದೆ. ಮಂಗಳವಾರ ಗ್ರಾಮ್ಗೆ 20 ರೂ ಕಡಿಮೆ ಆಗಿದೆ.
ಕೆಲ ದಿನಗಳ ಹಿಂದಷ್ಟೇ 425 ರೂ ಇದ್ದ ಬೆಳ್ಳಿ ಬೆಲೆ ಈಗ 280 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,39,100 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,51,750 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,39,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 28,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,000 ರೂ ಇದೆ.








