ಪಿಳಿಕುಳ ಮೃಗಾಲಯದಲ್ಲಿ ಪ್ರಾಣಿಗಳ ದಯನೀಯ ಸ್ಥಿತಿ ಕಂಡು ಬಂದ್ ಮಾಡಲು ಹೈಕೋರ್ಟ್ ನ್ಯಾಯಾಧೀಶರು ಸೂಚನೆ



(ನ್ಯೂಸ್ಕಡಬ) newskadaba.com,ಫೆ,02 ಮಂಗಳೂರು: ದಕ್ಷಿಣಕನ್ನಡ ಭಾಗದಲ್ಲಿ ಪಿಳಿಕುಳ ನಿಸರ್ಗಧಾಮವೆಂದರೆ ಮಕ್ಕಳ ಅಚ್ಚುಮೆಚ್ಚಿನ ತಾಣ ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಕರಾವಳಿಯ ಪ್ರಸಿದ್ಧ ಮೃಗಾಲಯದ ಅವ್ಯವವಸ್ಥೆ ಕಂಡು ಹೈ ಕೋರ್ಟ್ ನ್ಯಾಯಾಧೀಶರೇ ಶಾಕ್ ಹಾಕಿದ್ದು ತಕ್ಷಣ ಬಂದ್ ಮಾಡಿ ಎಂದು ಹೈಕೋರ್ಟ್ ನ್ಯಾಯಾಧಿಶರು ಸೂಚನೆ ನೀಡಿದ್ದಾರೆ.





ಇದೀಗ ಅಧಿಕಾರಿಗಳ ಬೇಜಾಬ್ದಾರಿಯಿಂದ ಮಂಗಳೂರಿನ ಪಿಲಿಕುಳ ಮೃಗಾಲಯಕ್ಕೆ ಸಂಕಷ್ಟ ಸುರುವಾಗಿದ್ದು ಮೃಗಾಲಯಕ್ಕೆ ಬೀಗ ಹಾಕಲು ಸೂಚಿಸಿದ್ದಾರೆ. ಪಿಳಿಕುಲ ಮೃಗಾಲಯದಲ್ಲಿರುವ ಪ್ರಾಣಿಗಳ ಫೋಟೋ ನೋಡಿ ಹೈಕೋರ್ಟ್ ನ್ಯಾಯಧೀಶರು ಗರಂ ಹಾಗಿದ್ದು ಉದ್ಯಾನವನದ ಪ್ರಾಣಿಗಳ ದಯನೀಯ ಸ್ಥಿತಿ ಕಂಡು ಹೈಕೋರ್ಟ್ ಅಕ್ರೋಶ ಹೊರಹಾಕಿದೆ






2025ರ ಡಿಸೆಂಬರ್‌ನಲ್ಲಿ ಲೈಸೆನ್ಸ್ ಅವಧಿ ಮುಗಿದಿದ್ದು ಪರವಾನಗಿ ಇಲ್ಲದೆ ನಡೆಯುತ್ತಿದೆಯೇ ಪಿಲಿಕುಳ ಎಂಬ ಸಂಶಯ ವ್ಯಕ್ತವಾಗಿದೆ. ಚಿಕಿತ್ಸೆ ಸಿಗದೆ ಮೂಕ ಪ್ರಾಣಿಗಳು ಸೊರಗುತ್ತಿದ್ದು ಜೋತೆಲೆ ಮಲೀನಗೊಂಡ ನೀರು ಕುಡಿದು ಪ್ರಾಣಿಗಳು ಅಸ್ವಸ್ಥಗೊಂಡಿರುವುದು ಕಂಡಬಂದಿದೆ.

ಸೆಂಟ್ರಲ್ ಝೋ ಅಟೊರಿಟಿ ಶೋಕಾಸ್ ನೋಟಿಸ್‌ಗೂ ನೀಡಿದರು ಆಡಳಿತ ಮಂಡಳಿ ಕ್ಯಾರೆ ಎನ್ನದ ಇರುವುದು ಕೂಡ ಕಂಡುಬಂದಿದ್ದು,ಕರಾವಳಿಯ ಪ್ರಮುಖ ಪ್ರವಾಸಿ ತಾಣದ ಅವಸ್ಥೆ ಕಂಡು ಪ್ರಾಣಿ ಪ್ರೇಮಿಗಳಲ್ಲಿ ತೀವ್ರ ಆತಂಕ ಹುಟ್ಟಿಕೊಂಡಿದೆ.

error: Content is protected !!
Scroll to Top