ಪ್ರಧಾನಿ ಮೋದಿ ನಂ. ಒನ್ ಸುಳ್ಳುಗಾರ: ರಮಾನಾಥ ರೈ ► ಕಡಬದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಮೇ.09. ನಮ್ಮಲ್ಲಿ ಇಬ್ಬರು ಸುಳ್ಳುಗಾರರಿದ್ದು, ಅದರಲ್ಲಿ ಒಂದನೆ ಸುಳ್ಳುಗಾರ ಸಂಸದ ನಳಿನ್ ಕುಮಾರ್ ಕಟೀಲ್, ಮತ್ತೊಬ್ಬ ಮಹಾನ್ ಸುಳ್ಳುಗಾರ ಇದ್ದರೆ ಅವರು ಈ ದೇಶದ ಪ್ರಧಾನಿ ಮೋದಿಯವರು. ಇನ್ನು ಮುಂದೆ ಜನ ಅವರನ್ನು ನಂಬುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು.

ಅವರು ಮಂಗಳವಾರದಂದು ಕಡಬ ಮೇಲಿನ ಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಲ್ಲ ಎಂಬ ಕಾರಣಕ್ಕಾಗಿ ನಾನು ಈ ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಕಡಬ ತಾಲೂಕು ಘೋಷಣೆ ಆಗಿದ್ದು ಇದರ ಉದ್ಘಾಟನೆ ಮಾಡಬೇಕು ಎಂದಿದ್ದರೂ ಅದಕ್ಕೆ ಅಡ್ಡಗಾಲು ಹಾಕಿದ್ದು ಈ ಕ್ಷೇತ್ರದ ಶಾಸಕ ಎಸ್. ಅಂಗಾರ. ಆದರೆ ಮುಂದಿನ ದಿನಗಳಲ್ಲಿ ಇಲ್ಲಿನ ಶಾಸಕರಾಗುವ ಡಾ| ರಘುರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ರಾಜಕೀಯದಲ್ಲಿ ಮಾತು ಉಳಿಸಿಕೊಂಡ ಮುಖ್ಯಮಂತ್ರಿ ಇದ್ದರೆ ಅದು ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ. ನಾವು ಈ ಭಾಗದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದೇವೆ. ಇಚಿಲಂಪಾಡಿ ಸೇತುವೆ ನಿರ್ಮಾಣ ಮಾಡಿದ್ದೇವೆ, ಉದನೆ ಸೇತುವೆ ಕೆಲಸ ಪ್ರಾರಂಭ ಆಗಿದೆ, ಕೊಲದಲ್ಲಿ ಪಶು ವೈದ್ಯಕೀಯ ಕಾಲೇಜು ಆಗಬೇಕಿದ್ದರೆ ನಮ್ಮ ಪ್ರಯತ್ನ ಇದೆ, ಸುಬ್ರಹ್ಮಣ್ಯ, ಕಡಬ ಸಮುದಾಯ ಆಸ್ಪತೆ ನಿರ್ಮಾಣ, 94ಸಿ ಅಡಿಯಲ್ಲಿ 9 ಸೆಂಟ್ಸ್ ಜಾಗ ಕೊಟ್ಟಿದ್ದೇವೆ. ಅರಣ್ಯ ಗುಪ್ಪೆಗೆ ಹತ್ತಿರ ಇರುವವರಿಗೆ ಜಾಗ ಕೊಟ್ಟಿದ್ದೆವೆ, ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ಪ್ರಯತ್ನ ಮಾಡಿದ್ದೆವೆ, ಆದರೆ ಅಂಗಾರರವರು ನಾನು ಮಾಡಿದ್ದು ಅಂತಾ ಸುಳ್ಳು ಹೇಳುತ್ತಿದ್ದಾರೆ, ಬೆಳಂದೂರು ಕಾಲೇಜು ಮಾಡಲು ನಾವು ಪ್ರಯತ್ನ ಮಾಡಿದ್ದೇವೆ ಎಂದರು.

Also Read  ಪಂಜ: ವರ್ಷಾವಧಿ ಜಾತ್ರೋತ್ಸವ ಹಸಿರು ಕಾಣಿಕೆ ಮೆರವಣಿಗೆಯ ಮೂಲಕ ಸಮಾಪ್ತಿ

ಇಲ್ಲಿಯ ಸಾಕಷ್ಟು ಅಭಿವೃದ್ದಿ ಕೆಲಸ ಆಗಿದ್ದು, ಇಲ್ಲಿಯ ಲೋಕಸಭಾ ಸದಸ್ಯರು ಸುಳ್ಳು ಹೇಳುತ್ತಿದ್ದಾರೆ ಅವರಿಂದ ಜಾಸ್ತಿ ಸುಳ್ಳು ಹೇಳುವರಿದ್ದಾರೆ ಅವರು ಮೋದಿ ಸಾಹೇಬ್ರು, ಅಂತರಾಷ್ಟಿಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾದರೂ ಡಿಸೇಲ್ ಪೆಟ್ರೋಲ್ ಬೆಲೆ ಇಳಿಸಲಿಲ್ಲ, ಗ್ಯಾಸ್ ಬೆಲೆ ಕಡಿಮೆ ಆಗಿಲ್ಲ, ಅಚ್ಚೆ ದಿನ್ ಬರ್ತದೆ ಅಂತ ಕಾದರೆ ಆ ದಿನ ಬರಲೇ ಇಲ್ಲ, ಕಪ್ಪು ಹಣ ಬರಲೇ ಇಲ್ಲ, ರೈತರ ಸಾಲ ಮನ್ನಾ ಮಾಡಿದ್ದೆವೆ, ಮೋದಿಯವರು ರೈತರ ಸಾಲ ಮಾಡದೆ ದೊಡ್ಡ ದೊಡ್ಡ ಉದ್ದಿಮೆದಾರರ ಸಾಲ ಮನ್ನಾ ಮಾಡಿದ್ದಾರೆ, ಇವರಿಗೆ ನಾಚಿಕೆ ಆಗುವುದಿಲ್ಲ, ಜಿ.ಎಸ್.ಟಿ.ಯಿಂದ ಜನ ಸಾಮಾನ್ಯರು ಬೀದಿಗೆ ಬಂದಿದ್ದಾರೆ. ಬಿಜೆಪಿ ಆಡಳಿತ ಇರುವಲ್ಲಿ ಉಚಿತ ಅಕ್ಕಿ ಕೊಡಲಿಲ್ಲ, ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡಿದ ಸಿದ್ದರಾಮಯ್ಯನವರನ್ನು ಮುಂದಿನ ಬಾರಿಯೂ ಅಧಿಕಾರಕ್ಕೆ ತರಬೇಕಿದೆ, ಬಹು ಮುಖ್ಯವಾಗಿ ಸುಳ್ಯ ಕ್ಷೇತ್ರದಲ್ಲಿ ಬದಲಾವಣೆ ಆಗಬೇಕಿದೆ ಇದಕ್ಕಾಗಿ ಕಾರ್ಯಕರ್ತರು ಇನ್ನು ಇರುವ ದಿನದಲ್ಲಿ ಸಾಕಷ್ಟು ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು. ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಗಂಗಾಧರ ಗೌಡ, ಸುಳ್ಯ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಸವಿತಾ ರಮೇಶ್, ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ಕಾಂಗ್ರೆಸ್ ಅಭ್ಯರ್ಥಿ ಡಾ| ರಘು, ಎಐಸಿಸಿಯ ಡಾ| ಅಭಿಲಾಷ್, ಕಣಚ್ಚೂರು ಮೋನು, ಮಾತನಾಡಿದರು.

Also Read  7 ಮಂದಿ ಮೀನುಗಾರರ ಅಪಹರಿಸಿ ಲಕ್ಷಾಂತರ ರೂ. ಮೌಲ್ಯದ ಮೀನು, ಡೀಸೆಲ್ ದೋಚಿದ ಅಪರಿಚಿತರು

ವೇದಿಕೆಯಲ್ಲಿ ವೆಂಕಟೇಶ್, ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಉಸ್ತುವಾರಿ ಯು.ಬಿ. ವೆಂಕಟೇಶ್, ಜಿ.ಪಂ. ಸದಸ್ಯ ಸವೋತ್ತಮ ಗೌಡ, ತಾ.ಪಂ. ಸದಸ್ಯರಾದ ಆಶಾ ಲಕ್ಷ್ಮಣ್, ಫಝಲ್ ಕೋಡಿಂಬಾಳ, ಗಣೇಶ್ ಕೈಕುರೆ, ಟಿ.ಎಂ. ಶಹೀದ್, ಮಾಜಿ ಶಾಸಕ ಕೆ. ಕುಶಲ, ಎ.ಸಿ. ಜಯರಾಜ್, ಮಾಜಿ ಜಿ.ಪಂ. ಸದಸ್ಯೆ ಕುಮಾರಿ ವಾಸುದೇವನ್, ಎಸ್. ಅಬ್ದುಲ್ ಖಾದರ್, ಸಿ.ಪಿಲಿಫ್, ಸೈಮನ್ ಸಿ.ಜೆ, ವಿಜಯ ಕುಮಾರ್ ರೈ ಕೆರ್ಮಾಯಿ, ಎಚ್.ಕೆ. ಇಲ್ಯಾಸ್, ಕೆ.ಪಿ.ತೋಮಸ್,  ನೀಲಾವತಿ ಶಿವರಾಮ, ಉಷಾ ಅಂಚನ್, ವಿಜಯ ಕುಮಾರ್ ಸೊರಕೆ, ಸೆಭಾಸ್ಟಿಯನ್ ಶಿರಾಡಿ, ಡೇನಿಸ್ ಫೆರ್ನಾಡಿಸ್, ರಾಮಕೃಷ್ಣ ಹೊಳ್ಳಾರು, ಶರೀಫ್ ಎ.ಎಸ್. ಎ.ಸಿ. ಮ್ಯಾಥ್ಯೂ, ಸುಧೀರ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಕಡಬ ಪೇಟೆಯಲ್ಲಿ ರೋಡ್ ಶೊ ನಡೆಸಿ ಮತ ಯಾಚನೆ ನಡೆಸಲಾಯಿತು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ದಿವಾಕರ ಗೌಡ ಸ್ವಾಗತಿಸಿ, ಪ್ರಚಾರ ಸಮಿತಿಯ ಅಧ್ಯಕ್ಷ ರಾಯ್ ಅಬ್ರಹಾಂ ವಂದಿಸಿದರು.

error: Content is protected !!
Scroll to Top