ಮಂಗಳೂರು: ಮುಕುಂದ್ ರಿಯಾಲ್ಟಿ ರುದ್ರಾಕ್ಷ್ ಐಷಾರಾಮಿ ಅಪಾರ್ಟ್ಮೆಂಟ್ ಯೋಜನೆಯ ಅನಾವರಣ



(ನ್ಯೂಸ್ಕಡಬ) newskadaba.com,.29  ಮಂಗಳೂರು: ಮಂಗಳೂರಿನ ಮುಂಚೂಣಿಯ ನಿರ್ಮಾಣ ಸಂಸ್ಥೆ ಮುಕುಂದ್ ರಿಯಾಲ್ಟಿ ಅತ್ಯಪೂರ್ವ ರುದ್ರಾಕ್ಷ್ ಐಷಾರಾಮಿ ಅಪಾರ್ಟ್ಮೆಂಟ್‌ನ ನೂತನ ಯೋಜನೆಯನ್ನು ತಣ್ಣೀರುಬಾವಿ ಬೀಚ್‌ನಲ್ಲಿ ಜರುಗಿದ ಡೆನ್ ಡೆನ್ ಅಂತಾರಾಷ್ಟ್ರೀಯ ಮುಕ್ತ ಈಜು ಚಾಂಪಿಯನ್‌ಶಿಪ್ ಸಂದರ್ಭ ಸಾಂಕೇತಿಕವಾಗಿ ಗಾಳಿಪಟ ಹಾರಿಸುವ ಮೂಲಕ ಅನಾವರಣಗೊಳಿಸಲಾಯಿತು.





ಆಹ್ವಾನಿತ ಅತಿಥಿಗಳು, ಕ್ರೀಡಾಪಟುಗಳು ಮತ್ತು ಸಂಸ್ಥೆಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ಮುಕುಂದ್ ರಿಯಾಲ್ಟಿಯ ವ್ಯವಸ್ಥಾಪಕ ಪಾಲುದಾರರಾದ ಗುರುದತ್ತ ಶೆಣೈ, ಮಹೇಶ್ ಶೆಟ್ಟಿ ಮತ್ತು ಮಂಗಲದೀಪ್ ಎ.ಆರ್. ನೇತೃತ್ವದಲ್ಲಿ ರುದ್ರಾಕ್ಷ್ ಯೋಜನೆಯ ಮಾಹಿತಿ ಪತ್ರ ಅನಾವರಣಗೊಳಿಸಲಾಯಿತು.






ಅಭೂತಪೂರ್ವವಾಗಿ ನಡೆದ ಡೆನ್ ಡೆನ್ 2026 ಹೊಸ ಯೋಜನೆ ಅನಾವರಣಕ್ಕೆ ವೇದಿಕೆ ಕಲ್ಪಿಸಿತ್ತು. ಮಂಗಳೂರಿನಲ್ಲಿ ಮುಕುಂದ್ ರಿಯಾಲ್ಟಿಯು ಜಾಗತಿಕ ಮಟ್ಟದ ಜೀವನಶೈಲಿ ಆಧಾರಿತ ವಸತಿಗಳನ್ನು ಒದಗಿಸುವ ರುದ್ರಾಕ್ಷ್ ಪರಿಕಲ್ಪನೆಯನ್ನು ಇಲ್ಲಿ ಪರಿಚಯಿಸಿರುವುದು ಕಾರ್ಯಕ್ರಮದ ಕೇಂದ್ರ ಬಿಂದುವಾಗಿತ್ತು.

error: Content is protected !!
Scroll to Top