(ನ್ಯೂಸ್ ಕಡಬ) newskadaba.com,ಜ.27 ಪುತ್ತೂರು: ಸಮಗ್ರ ಒಳಚರಂಡಿ ನಿರ್ಮಾಣ ಯೋಜನೆ ಬೇಡಿಕೆಯಿರುವ ಪುತ್ತೂರು ನಗರಕ್ಕೆ ಇದೀಗ ರಾಜ್ಯದ ಪ್ರಥಮ ಪಿಪಿಪಿ ಡ್ರೈನೇಜ್ ಸ್ಕೀಂ ಮಂಜೂರುಗೊಳ್ಳುವ ಹಂತದಲ್ಲಿದೆ.ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಬ್ಲಿಕ್ ಪ್ರೈವೇಟ್ ಪಾರ್ಟಿಸಿಪೇಶನ್-ಪಿಪಿಪಿ) ಸಮಗ್ರ ಒಳಚರಂಡಿ ರಚಿಸುವ 100 ಕೋಟಿ ರೂ.ಗಳ ಮೆಗಾ ಯೊಜನೆ ಇದಾಗಿದ್ದು, ಇನ್ನೊಂದು ವಾರದಲ್ಲಿ ಸರಕಾರದಿಂದ ಮಂಜೂರುಗೊಳ್ಳಲಿದೆ.
ಒಳಚರಂಡಿ ಅನಿವಾರ್ಯತೆ
ಮಂಗಳೂರು ಹೊರತುಪಡಿಸಿ ಜಿಲ್ಲೆಯ 2ನೇ ಅತಿದೊಡ್ಡ ನಗರವಾಗಿರುವ
ಪುತ್ತೂರಿನಲ್ಲಿ ಮಳೆ ನೀರು ಹರಿಯುವ ಚರಂಡಿ ವ್ಯವಸ್ಥೆ ಇದ್ದರೂ, ಮನೆ ಮನೆಗಳ, ವಾಣಿಜ್ಯ ಸಮುಚ್ಚಯಗಳ ಕೊಳಚೆ ನೀರು ಹರಿದು ವೈಜ್ಞಾನಿಕವಾಗಿ ಸಂಸ್ಕರಣೆಗೊಳ್ಳುವ ಒಳಚರಂಡಿಯಿಲ್ಲ
ಯೋಜನೆಯ ಸ್ವರೂಪ
100 ಕೋಟಿ ರೂ.ಗಳ ಮೆಗಾ ಯೋಜನೆ ಇದಾಗಿದ್ದು, ಇದರಲ್ಲಿ 15 ಕೋಟಿ ರೂ.ಗಳನ್ನು ರಾಜ್ಯ ಸರಕಾರ ಭರಿಸಲಿದೆ. 85 ಕೋಟಿಗಳನ್ನು ಖುವಾಕ್ ಕಂಪನಿ ಭರಿಸಿ ಯೋಜನೆ ಅನುಷ್ಠಾನಗೊಳಿಸಲಿದೆ. ಕಾಮಗಾರಿ ಸಂಪೂರ್ಣಗೊಂಡ ಬಳಿಕ 5 ವರ್ಷಗಳ ಕಾಲ ಇದೇ ಕಂಪನಿ ನಿರ್ವಹಣೆ ಮಾಡಲಿದೆ.








