ಐಸಿಎಸ್ಐ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಎಸ್.ಪವನ್ ಜಿ. ಚಂದಕ್ ಉಪಾಧ್ಯಕ್ಷರಾಗಿ ಸಿ.ಎಸ್. ದ್ವಾರಕಾನಾಥ್ ಚೆನ್ನೂರ್



(ನ್ಯೂಸ್ಕಡಬ) newskadaba.com,.24 ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದಡಿ ಬರುವ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರಟರೀಸ್ ಆಫ್ ಇಂಡಿಯಾ (ಐಸಿಎಸ್ಐ) ಸಂಸ್ಥೆ ಯ 2026ನೇ ಸಾಲಿನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿಎಸ್. ಪವನ್ ಜಿ. ಚಂದಕ್, ಉಪಾಧ್ಯಕ್ಷರಾಗಿ ಸಿಎಸ್. ದ್ವಾರಕಾನಾಥ್ ಚೆನ್ನೂರ್ ಆಯ್ಕೆಯಾಗಿದ್ದಾರೆ.





ಸಿ.ಎಸ್. ಪವನ್ ಜಿ. ಚಂದಕ್ ಅವರು ಅವರು ಅರ್ಹ ಕಾರ್ಮಿಕ ಕಾನೂನುಗಳು ಹಾಗೂ ಕಾರ್ಮಿಕ ಕಲ್ಯಾಣ ಕ್ಷೇತ್ರದಲ್ಲಿ ವಿಶೇಷ ಪರಿಣಿತಿ ಪಡೆದಿದ್ದಾರೆ. ಅವರು ಸಾಂಸ್ಥಿಕ ಕಾನೂನು, ವಿದೇಶಿ ವಿನಿಮಯ ಕಾನೂನು, ಕೈಗಾರಿಕಾ ಕಾನೂನು, ಕಾನೂನು ಮಾಪನ ಶಾಸ್ತ್ರ, ಸೆಕ್ರೇಟರಿ ವಲಯದಲ್ಲಿ ಲೆಕ್ಕಪತ್ರ ಪರಿಶೋಧನೆ, ಮಧ್ಯಸ್ಥಿಕೆ (ಆರ್ಬಿಟ್ರೇಷನ್) ವಿಚಾರಗಳು, ಎಸ್.ಇ.ಝಟ್, ಎಸ್.ಟಿ.ಪಿ.ಇ ಹಾಗೂ ಡಿಒಟಿ ಕ್ಷೇತ್ರಗಳಲ್ಲಿ ವಿಶಾಲ ಅನುಭವ ಹೊಂದಿದ್ದಾರೆ.






ಸಿಎಸ್ ದ್ವಾರಕಾನಾಥ್ ಚೆನ್ನೂರು ಅವರು ಐಸಿಎಸ್ಐ ಫೆಲೋ ಸದಸ್ಯರಾಗಿದ್ದು, ದಿವಾಳಿತನ ವಲಯದಲ್ಲಿ ಅವರು ವೃತ್ತಿಪರರು ಮತ್ತು ಅರ್ಹತೆ ಪಡೆದ ಸಾಮಾಜಿಕ ಲೆಕ್ಕ ಪರಿಶೋಧಕರು. 1992ರಲ್ಲಿ ಕಂಪನಿ ಸೆಕ್ರಟರಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಅವರು, ಸುಮಾರು 10 ವರ್ಷಗಳ ಕಾಲ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ ನಂತರ 2002ರಲ್ಲಿ ವೃತ್ತಿಪರ ಅಭ್ಯಾಸ ಆರಂಭಿಸಿದರು.

ಪ್ರಸ್ತುತ ಅವರು ಖಾಸಗಿ ಹಾಗೂ ಸಾರ್ವಜನಿಕ ವಲಯದಲ್ಲಿ ಪಟ್ಟಿ ಮಾಡಲಾದ ಕಂಪನಿ ಗಳು ಮತ್ತು ವಿದೇಶಿ ಕಂಪನಿಗಳ ಉಪಕಂಪನಿಗಳು ಒಳಗೊಂಡಂತೆ, ಕಂಪನಿಗಳ ಕಾಯ್ದೆ, ಫೆಮಾ, ಆರ್.ಬಿ.ಐ ನಿಯಮಗಳು ಮತ್ತು ಸೆಬಿ ನಿಯಮಗಳ ಅಡಿಯಲ್ಲಿ ಸೇವೆಗಳನ್ನು ನೀಡುತ್ತಿದ್ದಾರೆ. ಅವರ ಪರಿಣತಿ ಕ್ಷೇತ್ರಗಳಲ್ಲಿ ಸಾಂಸ್ಥಿಕ ಕಾನೂನುಗಳು ಮತ್ತು ದಿವಾಳಿತನ ಹಾಗೂ ದಿವಾಳಿತನ ಸಂಹಿತೆ, 2016 ಸೇರಿವೆ.

error: Content is protected !!
Scroll to Top