(ನ್ಯೂಸ್ ಕಡಬ) newskadaba.com,ಜ.24 ಬೆಳ್ತಂಗಡಿ: ವಾಹನವೊಂದಕ್ಕೆ ಬ್ಯಾಂಕ್ ಆಫ್ ಬರೋಡದಿಂದ ತೆಗೆದ ಲಕ್ಷಾಂತರ ರೂ ಸಾಲವನ್ನು ಕಟ್ಟದೆ ವಂಚಿಸಿದ ಘಟನೆ ನಡೆದಿದೆ. ಬ್ಯಾಂಕ್ ಮುಖ್ಯಸ್ಥರ ಪೋರ್ಜರಿ ಸಹಿಯನ್ನು ಲೆಟರ್ ಹೆಸ್ ನಲ್ಲಿ ಬಳಸಿ ಸಾಲ ಸಂಪೂರ್ಣ ಸಂದಾಯವಾಗಿರುವುದಾಗಿ ಸುಳ್ಳು ಪತ್ರವನ್ನು ಆರ್.ಟಿ.ಒ.ಕಚೇರಿಗೆ ನೀಡಿರುವುದರ ಕುರಿತು ದೂರು ದಾಖಲಾಗಿದೆ.
ಮೂಲತಃ ಬೆಳ್ತಂಗಡಿ ನಿವಾಸಿಗಳಾದ ತನ್ವಿರ್ ಹಾಗೂ ಅವರ ತಾಯಿ ನೆಬಿಶಾ ಮತ್ತು ಜುನೈದ್ ಮೆಲ್ಕಾರ್ ಹಾಗೂ ರಮೀಝ್ ಆಲಿಶ್ ಉಪ್ಪಿನಂಗಡಿ ಅವರ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ವೀರ್ ಅವರು ಅಶೋಕ್ ಲೈಲಾಂಡ್ ಕಂಪೆನಿಯ ಲಾರಿ ಪಡೆದುಕೊಳ್ಳಲು 2023 ಮಾ.16 ರಂದು ಬ್ಯಾಂಕ್ ಆಫ್ ಬರೋಡದ ಉಪ್ಪಿನಂಗಡಿ ಶಾಖೆಯಿಂದ ತಾಯಿ ನೆಬಿಶಾ ರವರು ನೀಡಿದ ಜಾಮೀನು ಮೇಲೆ 45 ಲಕ್ಷ ರೂ ಸಾಲವನ್ನು ಪಡೆದಿದ್ದರು.
ಆರ್.ಟಿ.ಒ.ಬಂಟ್ವಾಳ ಕಚೇರಿಯಿಂದ ಸಿಕ್ಕಿದ ನಿರಪೇಕ್ಷಣಾ ಪತ್ರ ಪಡೆದ ಆಧಾರದಂತೆ ರಮೀಝ್ ಆಲಿಶ್ ಅವರು ಪೂರ್ವನಿರ್ಧರಿತ ಷಡ್ಯಂತ್ರವನ್ನು ಮಾಡಿ ಇವರ ಹೆಸರಿಗೆ ಲಾರಿಯನ್ನು ವರ್ಗಾವಣೆಯನ್ನು ಮಾಡಿಕೊಂಡಿರುತ್ತಾರೆ. ಈ ಎಲ್ಲಾ ವಂಚನೆಯನ್ನು ನಾಲ್ಕು ಮಂದಿ ಸೇರಿ ಮಾಡಿರುವ ಕಾರಣಕ್ಕಾಗಿ ನಾಲ್ವರ ವಿರುದ್ಧ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ವಂಚನೆ ಪ್ರಕರಣ ದಾಖಲಿಸಲಾಗಿದೆ. ಪೋಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.








