ಮೇ 10 ಸಂಜೆ ಆರು ಗಂಟೆಯ ನಂತರ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ ► ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.08. ಮತದಾನ ಪ್ರಕ್ರಿಯೆ ಮುಗಿಯುವ 48 ಗಂಟೆಗೆ ಮೊದಲು ಹೊರಗಿನ ಯಾವೊಬ್ಬ ಚುನಾವಣಾ ತಾರಾ ಪ್ರಚಾರಕ, ಕ್ಷೇತ್ರದ ಮತದಾರರಲ್ಲದ ಕಾರ್ಯಕರ್ತರು, ಪಕ್ಷದ ನಾಯಕರು ಜಿಲ್ಲೆಯ ಯಾವೊಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವಂತಿಲ್ಲವಾಗಿದ್ದು, ಎಲ್ಲರೂ ಕ್ಷೇತ್ರ ಬಿಟ್ಟು ತೆರಳಬೇಕು ಎಂದು ಚುನಾವಣಾಧಿಕಾರಿಯೂ ಆದ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ 12 ರಂದು ನಡೆಯುವ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಸೂಚಿಸಲಾಗುವ ಎಲ್ಲಾ ಅಂಶಗಳನ್ನೂ ಮತದಾರರು ಹಾಗೂ ವಿವಿಧ ಪಕ್ಷಗಳು, ಅಭ್ಯರ್ಥಿಗಳು ಪಾಲಿಸಬೇಕು. ಅದಕ್ಕಾಗಿ ಈಗಾಗಲೆ ಎಲ್ಲ ಪಕ್ಷಗಳ ಪ್ರತಿನಿಧಿಗಳ ಸಭೆ ಕರೆದು ಮಾಹಿತಿ ನೀಡಲಾಗಿದೆ. ನಿಗದಿತ ಸಮಯದ ಬಳಿಕ ಹೊರಗಿನ ಪ್ರಚಾರಕ ಸಹಿತ ಕ್ಷೇತ್ರ ವ್ಯಾಪ್ತಿಯಲ್ಲದವರಿಗೆ ವಸತಿ ವ್ಯವಸ್ಥೆ ಕಲ್ಪಿಸದಂತೆ ಹೊಟೇಲ್, ಛತ್ರ, ವಸತಿಗೃಹದ ಮಾಲಕರಿಗೆ ಸೂಚಿಸಲಾಗಿದೆ. ಈ ಸೂಚನೆ ಮೀರಿ ಜಿಲ್ಲೆಯಲ್ಲಿ ಉಳಕೊಂಡರೆ ಅವರನ್ನು ಹೊರಗೆ ಕಳುಹಿಸಿಕೊಡಲಾಗುವುದು ಎಂದರು.

Also Read  ಮಂಗಳೂರು: ನದಿಗಿಳಿದ ಕಾರು ► ಯುವತಿಯರಿಬ್ಬರು ಅಪಾಯದಿಂದ ಪಾರು

ಜಿಲ್ಲೆಯ 1,858 ಮತಗಟ್ಟೆಗಳಲ್ಲಿ ಮೇ 12ರಂದು ಬೆಳಗ್ಗೆ ಅಣುಕು ಮತದಾನವನ್ನು ನಡೆಸಲಾಗುತ್ತದೆ. ಹಾಗಾಗಿ ಮತದಾನ ಪ್ರಾರಂಭವಾಗುವ ಮೊದಲು ಎಲ್ಲಾ ಪೋಲಿಂಗ್ ಏಜೆಂಟರು ಮುಂಜಾನೆ 5:45ಕ್ಕೆ ಸರಿಯಾಗಿ ಹಾಜರಿದ್ದು ಮತದಾನ ಮುಕ್ತಾಯವಾಗುವವರೆಗೆ ಮತಗಟ್ಟೆಯಲ್ಲಿ ಉಪಸ್ಥಿತರಿರುವಂತೆ ತಿಳಿಸಲಾಗಿದೆ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ನಿಗದಿಪಡಿಸಿದ ನಮೂನೆ 10 ರಲ್ಲಿ ತಮ್ಮ ಪೋಲಿಂಗ್ ಏಜೆಂಟರನ್ನು ಪ್ರತಿಯೊಂದು ಮತಗಟ್ಟೆಗಳಿಗೂ ನೇಮಕ ಮಾಡಲು ಅವಕಾಶವಿರುತ್ತದೆ. ನೇಮಕಾತಿ ಆದೇಶವನ್ನು ಆಯಾಯ ಮತಗಟ್ಟೆಗಳ ಅಧ್ಯಕ್ಷಾಧಿಕಾರಿಗೆ ನೀಡಬೇಕಾಗುತ್ತದೆ ಎಂದರು. ಜಿಲ್ಲೆಯಲ್ಲಿ 517 ಕ್ಲಿಷ್ಟ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಆವುಗಳಲ್ಲಿ ವೆಬ್‌ಕಾಸ್ಟಿಂಗ್/ಸಿ.ಪಿ.ಎಂ.ಎಫ್ ನಿಯೋಜನೆ/ವೀಡಿಯೊಗ್ರಾಫಿ ಮತ್ತು ಮೈಕ್ರೋ ವೀಕ್ಷಕರನ್ನು ನೇಮಕ ಮಾಡಲಾಗಿದೆ.

Also Read  ಕೊಣಾಜೆಯಲ್ಲಿ ಆನೆಗಳ ದಾಳಿ ► ಭತ್ತದ ಕೃಷಿ ನಾಶ

error: Content is protected !!
Scroll to Top