ಕಲ್ಲಡ್ಕ ಪ್ರಭಾಕರ್ ಭಟ್‍ಗೆ ಇವತ್ತು ಕೊನೆಯ ದಿನ ► ಮಂಗಳೂರು ಮುಸ್ಲಿಮ್ಸ್ ಪೇಜ್‍ನಿಂದ ಬಹಿರಂಗ ಬೆದರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.07. “ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‍ಗೆ ಇಂದು ಕೊನೆಯ ದಿನ” ಎಂದು ಮಂಗಳೂರು ಮುಸ್ಲಿಮ್ ಹೆಸರಿನಲ್ಲಿರುವ ಫೇಸ್‍ಬುಕ್ ಪೇಜ್ ನಲ್ಲಿ ಉದ್ರೇಕಕಾರಿ ಸ್ಟೇಟಸ್ ಅಪ್‍ಡೇಟ್ ಮಾಡಲಾಗಿದೆ.

ಭಯೋತ್ಪಾದಕ ಕಲ್ಲಡ್ಕ ಪ್ರಭಾಕರ ಭಟ್ಟ ಸತ್ತರೆ ಅವನಿಗೆ ರಾಷ್ಟ್ರ ಧ್ವಜ ಹಾಕಿ ಗೌರವಿಸುತ್ತಿರೋ ಇಲ್ಲಾ ಕೇಸರಿ ಧ್ವಜ ಹಾಕುತ್ತಿರೋ? ಇವತ್ತು ಅವನ ಕೊನೆಯ ದಿನ.. ತೀರ್ಮಾನಿಸಿ ಎಂದು ಈ ಎಫ್‍ಬಿ ಪೇಜ್‍ನಲ್ಲಿ ಸ್ಟೇಟಸ್ ಹಾಕಲಾಗಿದೆ. ಈ ಪೇಜ್ ನಲ್ಲಿ ರಾಜ್ಯಸರ್ಕಾರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದ್ದು, ಬಂಟ್ವಾಳದಲ್ಲಿ ಪ್ರತಿಭಟನೆಗೆ ಮುಂದಾದ ಸಂಘ ಪರಿವಾರದ ವ್ಯಕ್ತಿಗಳನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಲಾಗಿದೆ. ಕಲಾಯಿ ಅಸ್ರಫ್ ಅವರನ್ನು ಆರ್‍ಎಸ್‍ಎಸ್ ಸಂಘಪರಿವಾರದವರು ಭೀಕರವಾಗಿ ಕೊಲೆ ಮಾಡಿದನ್ನು ವಿರೋಧಿಸಿ ಮುಸ್ಲಿಮರು ಪ್ರತಿಭಟನೆ ನಡೆಸಲು ತಯಾರಾದಾಗ, ಇಲ್ಲಿ ನಿಷೇಧಾಜ್ಞೆ ಇದೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಪ್ರತಿಭಟನೆಗೆ ಮುಂದಾದರೆ ಎಲ್ಲರನ್ನೂ ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ ಎಂದು ಕಾಂಗ್ರೆಸ್ ಸರಕಾರದ ಪೋಲೀಸ್ ಇಲಾಖೆ ಹೇಳಿತ್ತು. ಈಗ ಏನು ಮಾಡುತ್ತಿದೆ? ಇಷ್ಟು ಸಂಖ್ಯೆಯಲ್ಲಿ ಸಂಘಪರಿವಾರ ದವರು ಪ್ರತಿಭಟನೆಗಾಗಿ ಬಿ.ಸಿ.ರೋಡ್ ಬಂದು ಸೇರಲು ಎಲ್ಲಾ ರೀತಿಯ ಸಹಕಾರ ಪೊಲೀಸ್ ಇಲಾಖೆ ಮಾಡುವಂತೆ ಮಾಡಿದ್ದು ಪ್ರಭಾಕರ ಭಟ್ಟನಾ ಇಲ್ಲ? ಉಸ್ತುವಾರಿ ಸಚಿವರಾ? ರಾಜ್ಯದ ಜನತೆಗೆ ಕಾಂಗ್ರೆಸ್ ಸರಕಾರ ಉತ್ತರಿಸಬೇಕು ಎಂದು ಪ್ರಕಟಿಸಲಾಗಿದೆ.

Also Read  ಮನಿಲಾ ಪ್ರಯಾಣಿಕ ಹಡಗಿನಲ್ಲಿ ಬೆಂಕಿ ➤ 31 ಮಂದಿ ಸಜೀವದಹನ ಹಲವರು ನಾಪತ್ತೆ..!

ಕೃಪೆ: ಪಬ್ಲಿಕ್ ಟಿವಿ https://goo.gl/HakvcW


ಮಂಗಳೂರು ಮುಸ್ಲಿಮ್, ವೀರ ಕೇಸರಿ ಎಂಬಿತ್ಯಾದಿ ಫೇಸ್‍ಬುಕ್ ಪೇಜ್‍ಗಳಲ್ಲಿ ಬರುವಂತಹ ಇಂತಹ ಪ್ರಚೋದನಕಾರಿ ಬರಹಗಳಿಂದ ಮುಗ್ಧ ಜನರನ್ನು ಹಾದಿ ತಪ್ಪಿಸಿ ಅಶ್ರಫ್, ಶರತ್ ನವರಂತಹ ಇನ್ನೆಷ್ಟು ಅಮಾಯಕ ಜೀವಗಳನ್ನು ಬಲಿ ತೆಗೆಯಲಿಕ್ಕಿದೆಯೋ…?? ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಂಡು ಅಮಾಯಕರ ಜೀವದ ಜೊತೆ ಚೆಲ್ಲಾಟವಾಡದೆ ಸಮಾಜದಲ್ಲಿ ಕೋಮು ಸಂಘರ್ಷವನ್ನುಂಟುಮಾಡುತ್ತಿರುವ ಅಧಿಕಾರಶಾಹಿ ಗೂಂಡಾಗಳನ್ನು ಒದ್ದು ಒಳಹಾಕಿದಲ್ಲಿ ಮಾತ್ರ ಶಾಂತಿಪ್ರಿಯರು ನೆಮ್ಮದಿಯ ನಿಟ್ಟುಸಿರು ಬಿಡಬಹುದು.

Also Read  ನೆಲ್ಯಾಡಿ: ಕಾರಿನ ಮೇಲೆ ಉರುಳಿ ಬಿದ್ದ ಲಾರಿ ➤ ಇಬ್ಬರು ಸ್ಥಳದಲ್ಲೇ ಮೃತ್ಯು, ಮೂವರು ಗಂಭೀರ

 

error: Content is protected !!
Scroll to Top